ವಾಷಿಂಗ್ಟನ್: ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲೆ ಹೇರಿದ್ದ ನಿರ್ಬಂಧವನ್ನು ರದ್ದುಗೊಳಿಸಿರುವ ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧನ್ಯವಾದ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಔಷಧದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೇ ಇದ್ದರೆ ಪ್ರತಿಕಾರ ತೀರಿಸಿಕೊಳ್ಳತ್ತೇವೆ ಎಂದಿದ್ದ ಟ್ರಂಪ್, ಇದೀಗ ಮೋದಿಯ ನಿರ್ಧಾರಕ್ಕೆ ಎರಡನೇ ಬಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಗುಜರಾತ್ನ ಮೂರು ಕಾರ್ಖಾನೆಗಳಿಂದ ಒಟ್ಟು 29 ಮಿಲಿಯನ್ ಡೋಸ್ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಈಗಾಗಲೇ ರವಾನಿಸಲಾಗುತ್ತಿದೆ. ಹಾಗಾಗಿ ಮೋದಿ ಬಗ್ಗೆ ಹೊಗಳಿ ಮಾತನಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್ \ಇಂತಹ ಸಂದರ್ಭದಲ್ಲಿ ಸ್ನೇಹಿತರ ನಡುವೆ ಇನ್ನೂ ಹೆಚ್ಚಿನ ಸಹಕಾರ ಅಗತ್ಯವಿದೆ. ಭಾರತ ಈಗ ತೆಗೆದುಕೊಂಡಿರುವ ನಿರ್ಧಾರವನ್ನು ಎಂದಿಗೂ ಮರೆಯಾಲಾಗುವುದಿಲ್ಲ. ಅದಕ್ಕೆ ಭಾರತ ಸರ್ಕಾರ ಹಾಗೂ ಭಾರತದ ಜನತೆಗೆ ಧನ್ಯವಾದ. ಹಾಗೆಯೇ ಮಾನವೀಯತೆಯಿಂದ ಮಾಡಿರುವ ಸಹಾಯ ಹಾಗೂ ನಿಮ್ಮ ಪ್ರಬಲ ನಾಯಕತ್ವಕ್ಕೆ ಧನ್ಯವಾದಗಳು‘ ಎಂದು ಹೇಳಿದ್ದಾರೆ.
Extraordinary times require even closer cooperation between friends. Thank you India and the Indian people for the decision on HCQ. Will not be forgotten! Thank you Prime Minister @NarendraModi for your strong leadership in helping not just India, but humanity, in this fight!
— Donald J. Trump (@realDonaldTrump) April 8, 2020