ಉಗ್ರರ 7 ಕ್ಯಾಂಪ್​ಗಳು ಉಡೀಸ್​! 50 ಉಗ್ರರು ಮಟಾಶ್..!

0
1736

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಶೆಲ್ ದಾಳಿ ನಡೆಸಿ 7 ಉಗ್ರ ನೆಲೆಗಳನ್ನು ಸೇನೆ ಉಡೀಸ್ ಮಾಡಿದೆ. ಈ ಕಾರ್ಯಚರಣೆಯಲ್ಲಿ 50ಕ್ಕೂ ಹೆಚ್ಚು ಮಂದಿ ಉಗ್ರರು ಫಿನಿಶ್ ಆಗಿದ್ದಾರೆ. ಪಿಒಕೆಯಲ್ಲಿ ಭಾರತ 3ಸಾವಿರಕ್ಕೂ ಹೆಚ್ಚು ಶೆಲ್​ಗಳಿಂದ ಅಟ್ಯಾಕ್ ಮಾಡಿದ್ದು, ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ‘ಪಾಪಿ’ಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಿದೆ.
ಬೋಫೋರ್ಸ್​ ಫಿರಂಗಿ ಬಳಸಿ ಉಗ್ರ ನೆಲೆಗಳ ಮೇಲೆ ಭಾರತ ದಾಳಿ ಮಾಡಿದ್ದು, ಬೋಫೋರ್ಸ್​ ಹೌವಿಟ್ಜರ್​ ಫಿರಂಗಿ ಮೂಲಕ ಉಗ್ರ ನೆಲೆ ಉಡೀಸ್ ಮಾಡಿದೆ. ಕಾರ್ಗಿಲ್ ಕದನದಲ್ಲೂ ಪಾಕ್ ವಿರುದ್ಧ ಇದೇ ಫಿರಂಗಿ ಬಳಕೆ ಮಾಡಲಾಗಿತ್ತು. ಈಗ 7 ಉಗ್ರ ನೆಲೆ ಧ್ವಂಸಕ್ಕೂ ಬಳಸಿದ್ದು ಬೋಫೋರ್ಸ್​ ಫಿರಂಗಿಯನ್ನು.

LEAVE A REPLY

Please enter your comment!
Please enter your name here