ಭಾರತದ ಮೇಲೆ ಮತ್ತಷ್ಟು ಉಗ್ರ ದಾಳಿಗೆ ಸಂಚು ನಡೆದಿತ್ತು..!

0
252

ನವದೆಹಲಿ: ಭಾರತದ ಮೇಲೆ ಮತ್ತಷ್ಟು ಉಗ್ರ ದಾಳಿಗೆ ಸಂಚು ನಡೆದಿತ್ತು. ಅದನ್ನೆಲ್ಲಾ ತಡೆಗಟ್ಟಲು ಉಗ್ರ ನೆಲೆಗಳನ್ನು ಧ್ವಂಸ ಮಾಡಲಾಗಿದೆ ಅಂತ ವಿದೇಶಾಂಗ ಕಾರ್ಯದರ್ಶಿ ವಿಜಯ್​ ಗೋಖಲೆ ಹೇಳಿದ್ದಾರೆ.

ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತದ ವಾಯುಪಡೆಗಳು ಏರ್ ಸರ್ಜಿಕಲ್ ಸ್ಟ್ರೈಕ್​ ನಡೆಸಿದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಭಾರತದ ಮೇಲೆ ಆತ್ಮಾಹುತಿ ಉಗ್ರ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಮಂಗಳವಾರ ಬೆಳಗಿನ ಜಾವ ಭಾರತದ ವಾಯುಪಡೆ ಬಾಲ್​ಕೋಟ್​ನಲ್ಲಿ ಜೈಷ್​ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದೆ. ಈ ಮೂಲಕ ಪಾಕ್​ಗೆ ಸರಿಯಾದ ಪಾಠ ಕಲಿಸಿ, ದಾಳಿಯಲ್ಲಿ ಭಯೋತ್ಪಾದಕ ಮುಖಂಡರನ್ನು ನಿರ್ನಾಮ ಮಾಡಿದ್ದೇವೆ” ಎಂದಿದ್ದಾರೆ.

“ಬಾಲ್​ಕೋಟ್​​ನಲ್ಲಿ ನಡೆದ ದಾಳಿಯಲ್ಲಿ ಜೆಮ್​ ಉಗ್ರರು, ತರಬೇತಿ ಪಡೆಯುತ್ತಿದ್ದವರೂ, ಹಿರಿಯ ಮುಖಂಡರೂ ಮೃತಪಟ್ಟಿದ್ದಾರೆ.  ಇವರೆಲ್ಲರನ್ನೂ ಜೈಷ್​ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್​ ಅಝರ್​ನ ಸಂಬಂಧಿ ಮೌಲಾನಾ ಯೂಸಫ್ ಅಜರ್​ ಅಡಿಯಲ್ಲಿ ಕೃತ್ಯಗಳನ್ನು ನಡೆಸುತ್ತಿದ್ದರು. ಪಾಕಿಸ್ತಾನ ಸರ್ಕಾರಕ್ಕೆ ಗೊತ್ತಿಲ್ಲದೇ ಉಗ್ರರು ಪ್ರಬಲ ಅಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ. ಉಗ್ರರಿಗೆ ತರಬೇತಿ ನೀಡುವ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿಯಿದೆ. ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾದಂತೆ ದಾಳಿ ಮಾಡಲಾಗಿದೆ. ಕಳೆದ 20 ವರ್ಷಗಳಿಂದ ಜೈಷ್​ ಉಗ್ರ ಕೇಂದ್ರಗಳು ಪಾಕ್​ನಲ್ಲಿ ಸಕ್ರಿಯವಾಗಿವೆ” ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here