ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

0
227

ಜಮ್ಮುಕಾಶ್ಮೀರ: ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರ ಉಪಟಳ ಹೆಚ್ಚಿದೆ. ಕಳೆದ ಎರಡು ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಮನಕ್ಕೆ ನಿರಂತರ ಕಾರ್ಯಾಚರಣೆ ನಡೆಸಲಾಗ್ತಿದೆ.

ಇಂದು ಪುಲ್ವಾಮಾ ಜಿಲ್ಲೆಯ ರತ್ನಿಪುರ್‌ನಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರನ್ನ ಹೊಡೆದುರುಳಿಸಲಾಗಿದೆ. ನಿನ್ನೆಯಷ್ಟೇ ಕುಲ್ಗಾಮ್‌ನಲ್ಲಿ ಲಷ್ಕರ್‌ ಇ ತೊಯ್ಬಾ, ಹಿಜ್ಬುಲ್‌ ಮುಜಾಹುದ್ದೀನ್‌  ಸಂಘಟನೆಯ ಐವರು ಉಗ್ರರಿಗೆ ಭಾರತೀಯ ಸೇನೆ ಹೆಡೆ ಮುರಿ ಕಟ್ಟಿತ್ತು. ಇದರ ಬೆನ್ನಲ್ಲೇ ಇವತ್ತು ಮತ್ತೆ ಫೀಲ್ಡ್‌ಗೆ ಇಳಿದ ಸೇನೆ ಇಂದು ಇಬ್ಬರು ಉಗ್ರರರನ್ನು ಹೊಡೆದುರುಳಿಸಿದೆ.

LEAVE A REPLY

Please enter your comment!
Please enter your name here