ಉಗ್ರ ಸಂಹಾರಕ್ಕೆ ಭಾರತದ ಜೊತೆ ಕೈ ಜೋಡಿಸಿದ ಸೌದಿ..!

0
277

ನವದೆಹಲಿ : ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೊರಾದಲ್ಲಿ ಫೆಬ್ರವರಿ 14ರಂದು ನಡೆದ ಉಗ್ರರ ದಾಳಿಯ ಬಳಿಕ ಬಹುತೇಕ ರಾಷ್ಟ್ರಗಳು ಉಗ್ರ ಸಂಹಾರಕ್ಕೆ, ಪಾಕ್ ದಮನಕ್ಕೆ ಭಾರತಕ್ಕೆ ಬೆಂಬಲ ನೀಡುವ ಭರವಸೆ ನೀಡುತ್ತಿವೆ. ಇದೀಗ ಉಗ್ರ ಸಂಹಾರಕ್ಕೆ ಸೌದಿ ಅರೇಬಿಯಾ ಭಾರತಕ್ಕೆ ಕೈ ಜೋಡಿಸುವುದಾಗಿ ತಿಳಿಸಿದೆ.
ಭಾರತದ ಪ್ರವಾಸದಲ್ಲಿರುವ ಸೌದಿ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್​ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಅವರೊಡನೆ ಚರ್ಚಿಸಿದ್ರು. ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಮುಖವಾಗಿ 5 ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಔಷಧಿ, ಇಂಧನ, ವಿದ್ಯುತ್ ಶಕ್ತಿ, ಪ್ರವಾಸೋದ್ಯಮ ಮತ್ತು ಕ್ರೀಡೆ ಕುರಿತು ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್​, ಭಾರತದ ಜೊತೆ ನಮ್ಮ ಬಾಂಧವ್ಯ ತುಂಬಾ ಹಳೆಯದು. ಭಾರತದಲ್ಲಿ 3 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಮಾಡಿದ್ದೇವೆ. ಉಗ್ರರ ವಿರುದ್ಧ ಜೊತೆಗೂಡಿ ಹೋರಾಡುವುದು ಅಗತ್ಯವಾಗಿದೆ. ಉಗ್ರರಿಗೆ ಸಂಬಂಧಿಸಿದ ವಿಚಾರಗಳನ್ನು ಭಾರತದ ಜೊತೆ ಹಂಚಿಕೊಳ್ಳಲಿದ್ದೇವೆ. ಭಯೋತ್ಪಾದನೆ ಸಾಮಾನ್ಯ ಕಾಳಜಿ. ಭಯೋತ್ಪಾದನೆ ಹತ್ತಿಕ್ಕಲು ನಾವು ಭಾರತ ಮತ್ತು ನೆರೆಯ ರಾಷ್ಟ್ರಗಳಿಗೆ ಬೆಂಬಲ ನೀಡುತ್ತೇವೆ ಎಂದು ಹೇಳುವ ಮೂಲಕ ಉಗ್ರ ದಮನಕ್ಕೆ ಭಾರತಕ್ಕೆ ಸಾಥ್ ನೀಡುವುದಾಗಿ ಭರವಸೆ ನೀಡಿದ್ರು.
ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ಸೌದಿ ಅರೇಬಿಯಾ ಭಾರತ ಉತ್ತಮ ಸ್ನೇಹಿತ. ಮಹತ್ವದ 5 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ. ಜೊತೆಗೆ ಪ್ರವಾಸೋದ್ಯಮ, ವಾಣಿಜ್ಯ ವ್ಯವಹಾರ, ಇಂಧನ, ವಸತಿ, ಕ್ರೀಡೆ , ಹಣಕಾಸು ವ್ಯವಹಾರಗಳ ವೃದ್ಧಿಯ ಬಗ್ಗೆ ಇಬ್ಬರೂ ಚರ್ಚಿಸಿದ್ದೇವೆ ಎಂದರು.
ಪುಲ್ವಾಮಾ ದಾಳಿ ಜಗತ್ತಿಗೆ ಯಾವ ರೀತಿ ಉಗ್ರರು ಮಾರಕ ಎಂದು ತೋರಿಸಿದೆ . ಉಗ್ರರನ್ನು ದಮನ ಮಾಡಲು ಇಡೀ ವಿಶ್ವವೇ ಒಂದಾಗಬೇಕು .ಉಗ್ರರಿಗೆ ಬೆಂಬಲ ಕೊಡೋರಿಗೆ ನೆರವು ನೀಡೋದನ್ನ ಮೊದಲು ನಿಲ್ಲಿಸಬೇಕು ಎಂತಲೂ ಮೋದಿ ಹೇಳಿದ್ರು.

LEAVE A REPLY

Please enter your comment!
Please enter your name here