Saturday, May 28, 2022
Powertv Logo
Homeರಾಜ್ಯತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಯತ್ನಿಸಿದ್ದ ಆರೋಪಿಗಳು ಯಾರು? ಎಲ್ಲಿಯವರು?

ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಯತ್ನಿಸಿದ್ದ ಆರೋಪಿಗಳು ಯಾರು? ಎಲ್ಲಿಯವರು?

ಬೆಂಗಳೂರು:  ಸಂಸದ ತೇಜ್ವಸಿ ಸೂರ್ಯ ಮತ್ತು ಪ್ರಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಯತ್ನಿಸಿದ್ದ

ಆರೋಪಿಗಳು, ಆರ್​ಎಸ್​ಎಸ್ ಕಾರ್ಯಕರ್ತ ವರುಣ್​ ಮೇಲೆ ಹಲ್ಲೆ ಮಾಡಿ ಸಿಕ್ಕಿಬಿದ್ದವರು  ದೂರದಿಂದ ಬಂದವರಲ್ಲ. ನಮ್ಮ ಬೆಂಗಳೂರಿನಲ್ಲೇ ಇದ್ದವರು. ಜೀವನೋಪಯಕ್ಕಾಗಿ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದವರು ಅನ್ನೋ ವಿಷಯ ಬಹಿರಂಗವಾಗಿದೆ. 

ಆರೋಪಿಗಳಲ್ಲಿ ನಂ.1 ಇರ್ಫಾನ್​ ಅಲಿಯಾಸ್​ ಮೊಹಮ್ಮದ್​ ಇರ್ಫಾನ್​  (33) ಬೆಂಗಳೂರು ಆರ್​ಟಿ ನಗರದ ಶಾಂಪುರ ಮುಖ್ಯ ರಸ್ತೆಯ ನಿವಾಸಿಯಾಗಿದ್ದು, ಟೇಲರ್ ವೃತ್ತಿ ಮಾಡಿಕೊಂಡಿದ್ದ. 

ಆರೋಪಿ ನಂ.2 ಸೈಯದ್​ ಅಕ್ಬರ್​. ಮೆಕ್ಯಾನಿಕ್​ ಅಕ್ಬರ್​ (46)  ಈತ  ಆರ್​ಟಿ ನಗರದ ಭುವನೇಶ್ವರಿ ನಗರ ನಿವಾಸಿಯಾಗಿದ್ದ. 

ಆರೋಪಿ ನಂ.3 ಸೈಯದ್​ ಸಿದ್ದಿಕ್​ ಅಕ್ಬರ್​ ಅಲಿಯಾಸ್​ ಸಿದ್ದಿಕ್​ (30) ವೃತ್ತಿಯಲ್ಲಿ ಸಿವಿಲ್​ ಕಂಟ್ರ್ಯಾಕ್ಟರ್​ ಆಗಿದ್ದು, ಬೆಂಗಳೂರಿನ ಲಿಂಗರಾಜಪುರಂ ನಿವಾಸಿ. 

 ಆರೋಪಿ ನಂ.4 ಅಕ್ಬರ್​ ಭಾಷಾ (27) ಬೆಂಗಳೂರಿನ ಕೆಜಿ ಹಳ್ಳಿಯ ಗೋವಿಂದಪುರದ ನಿವಾಸಿಯಾಗಿದ್ದು,  ಅಮೆಜಾನ್​ ಕಂಪನಿಯಲ್ಲಿ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ. 

ಆರೋಪಿ ನಂ. 5 ಸನಾವುಲ್ಲಾ ಷರೀಫ್​ ಅಲಿಯಾಸ್​ ಮೊಹಮ್ಮದ್​ ಸನಾ (28) ಬೆಂಗಳೂರಿನ ಆರ್​ಟಿ ನಗರದ ಶಾಂಪುರ್​ ಮುಖ್ಯ ರಸ್ತೆಯ ನಿವಾಸಿಯಾಗಿದ್ದು, ಎಲೆಕ್ಟ್ರಿಕಲ್​ ಇಂಟಿರಿಯರ್​ ಕೆಲಸ ಮಾಡಿಕೊಂಡಿದ್ದ.

ಅದೇರೀತಿ  ಆರೋಪಿ ನಂ. 6 ಸಾಧಿಕ್​ ಉಲ್ಲ ಅಮೀನ್​ ಅಲಿಯಾಸ್​ ಸೌಂಡ್​ ಸಾಧಿಕ್​ (39) ಬೆಂಗಳೂರು ಶಿವಾಜಿ ನಗರದ ಚಾಂದಿನಿ ಚೌಕ್​ ನಿವಾಸಿಯಾಗಿದ್ದು, ಸೌಂಡ್ ಸಿಸ್ಟಂ ಅಂಗಡಿ ಹೊಂದಿದ್ದಾನೆ ಎಂದು ತಿಳಿದುಬಂದಿದೆ. 

LEAVE A REPLY

Please enter your comment!
Please enter your name here

- Advertisment -

Most Popular

Recent Comments