ಜಮ್ಮು ದಾಳಿ: ಘಟನೆ ನಡೆದ 5 ಗಂಟೆಯಲ್ಲೇ ಉಗ್ರನ ಬಂಧನ

0
235

ಶ್ರೀನಗರ: ಜಮ್ಮುವಿನಲ್ಲಿ ಗ್ರೆನೇಡ್‌ ದಾಳಿ ಹಿಂದೆ ಹಿಜ್ಬುಲ್ ಕೈವಾಡವಿರುವುದು ತಿಳಿದುಬಂದಿದೆ. ಉಗ್ರ ಸಂಘಟನೆ ಹಿಜ್ಬುಲ್‌ನ ಓರ್ವ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿ ಸಂಬಂಧ ಯಾಸೀರ್ ಜಾವೇದ್ ಭಟ್ ಅಲಿಯಾಸ್ ಅಹ್ರಾನ್​ನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಜಮ್ಮುಕಾಶ್ಮೀರದ ಐಜಿಪಿ ಎಂ.ಕೆ. ಸಿನ್ಹಾ ಹೇಳಿಕೆ ನೀಡಿದ್ದಾರೆ.

ಇಂದು ಬೆಳಗ್ಗೆ ಜಮ್ಮುವಿನಲ್ಲಿ ಗ್ರೆನೇಡ್ ದಾಳಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿದ್ದರು. ಜಮ್ಮು ಬಸ್‌ ನಿಲ್ದಾಣದಲ್ಲಿ ಗ್ರೆನೇಡ್‌ ದಾಳಿ ನಡೆದಿದ್ದು, ಪ್ರಕರಣದ ಪ್ರಮುಖ ಆರೋಪಿ ಯಾಸಿನ್​ನ್ನು ಘಟನೆ ನಡೆದ 5 ಗಂಟೆಯೊಳಗೆ ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here