ನಿಮಗೆ ನೆನಪಿರಬಹುದು, ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ಒಡಿಐ ವರ್ಲ್ಡ್ಕಪ್ನಲ್ಲಿ ಪೀಪಿ ಊದುತ್ತಾ ಟೀಮ್ ಇಂಡಿಯಾವನ್ನು ಪ್ರೋತ್ಸಾಹಿಸಿದ್ದ ಆ 87 ಅಜ್ಜಿ! ಈಗ ನಿಮ್ ಕಣ್ಮುಂದೆ ಬಂದ್ರಲ್ಲಾ ಕ್ರಿಕೆಟ್ ಪ್ರೇಮಿ ಚಾರುಲತಾ ಪಟೇಲ್? ಅವರೇ…ಅದೇ ಅಜ್ಜಿ! ಇನ್ಮುಂದೆ ಅವರು ಕ್ರಿಕೆಟ್ ಗ್ಯಾಲರಿಯಲ್ಲಿ ಮಾತ್ರವಲ್ಲ ಎಲ್ಲೂ ಕಾಣಿಸಿಕೊಳ್ಳಲ್ಲ. ಅವರು ಇನ್ನು ನೆನಪು ಮಾತ್ರ.
ಹೌದು ಟೀಮ್ ಇಂಡಿಯಾದ ಸೂಪರ್ ಫ್ಯಾನ್ ಚಾರುಲತಾ ಪಟೇಲ್ ಜನವರಿ 13ರಂದು ವಿಧಿವಶರಾಗಿದ್ದಾರೆ. ಭಾರತ ಮೂಲದವರಾಗಿದ್ದ ಅವರು ಇಂಗ್ಲೆಂಡ್ನಲ್ಲಿ ನೆಲೆಸಿದ್ರು. ಕ್ರಿಕೆಟ್ ಪ್ರೇಮಿಯಾಗಿದ್ದ ಅವರಿಗೆ ಟೀಮ್ ಇಂಡಿಯಾ ಅಂದ್ರೆ ಅಚ್ಚು-ಮೆಚ್ಚು. 2019ರ ಜುಲೈ 2ರಂದು ಇಂಗ್ಲೆಂಡ್ನ ಬರ್ಮಿಂಗ್ ಹ್ಯಾಮ್ನಲ್ಲಿ ನಡೆದ ಬಾಂಗ್ಲಾ ವಿರುದ್ಧದ ಮ್ಯಾಚಲ್ಲಿ ಪೀಪಿ ಊದುತ್ತಾ, ಕ್ರಿಕೆಟ್ ಎಂಜಾಯ್ ಮಾಡ್ತಾ ಕೊಹ್ಲಿ ಪಡೆಯನ್ನು ಪ್ರೋತ್ಸಾಹಿಸ್ತಿದ್ರು. ಆ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕ್ಯಾಪ್ಟನ್ ಕೊಹ್ಲಿ, ವೈಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಅಜ್ಜಿಯನ್ನು ಭೇಟಿ ಮಾಡಿ ಆಶೀರ್ವಾದ ಕೂಡ ಪಡೆದಿದ್ರು. ಅವರ ನಿಧನಕ್ಕೆ ಬಿಸಿಸಿಐ ಸಂತಾಪ ಸೂಚಿಸಿದೆ.
MUST WATCH | What happened when 87-year old Mrs. #CharulataPatel met @ImRo45 & @imVkohli? 😊😍🙏🙌(BCCI) #RIPCharulataPatel
(Source: BCCI)pic.twitter.com/1WuaEBadxr— 🇮🇳Gurkanwal Singh🇮🇳 (@RealGurkanwal) January 16, 2020