Home ರಾಜ್ಯ ಬೆಟ್ಟವೇರಿ ಶಿಕ್ಷಣ ನೀಡುತ್ತಿರುವ ಶಿಕ್ಷಕಿಯರ ಸಾಹಸಗಾಥೆ..!

ಬೆಟ್ಟವೇರಿ ಶಿಕ್ಷಣ ನೀಡುತ್ತಿರುವ ಶಿಕ್ಷಕಿಯರ ಸಾಹಸಗಾಥೆ..!

ಮಂಗಳೂರು: ಹಿಮಗಳಿಂದ ಆವರಿಸಿದ ‘ಮೌಂಟ್ ಎವರೆಸ್ಟ್’ ಏರೋದರ ಹಿಂದೆ ಹತ್ತು ಹಲವು ಹಿತಾಸಕ್ತಿಗಳು ಇರುತ್ತವೆ. ಆದರೆ ಇಲ್ಲೊಂದು ಶಿಕ್ಷಕಿಯರ ತಂಡ ಶಿಕ್ಷಣದಿಂದ ವಿದ್ಯಾರ್ಥಿಯೊಬ್ಬ ವಂಚಿತನಾಗಬಾರದು ಅನ್ನೋ ಕಾಳಜಿಯಿಂದಷ್ಟೇ ವಾರಕ್ಕೊಮ್ಮೆ 10 ಕಿಲೋ ಮಿಟರ್ ದೂರದ ಬೆಟ್ಟವೇರುತ್ತಿದ್ದಾರೆ.

ಸರ್ಕಾರಿ ಶಾಲಾ ಶಿಕ್ಷಕಿಯರ ಈ ಸಾಹಸಗಾಥೆ ಕೇಳುತ್ತಿದ್ದರೆ ನಿಜಕ್ಕೂ ಮೈ ರೋಮಾಂಚನಗೊಳ್ಳುತ್ತೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ತಾಲ್ಲೂಕಿನ ಪಣಪಿಲ ಗ್ರಾಮದಲ್ಲಿರುವ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೊರೋನಾ ಕಾರಣದಿಂದ ತಿಂಗಳುಗಳಿಂದ ಮುಚ್ಚಿದೆ. ಆದರೆ ತರಗತಿಯ ಪಾಠವನ್ನ ಹೇಗಾದರೂ ತಲುಪಿಸಲೇಬೇಕು ಅನ್ನೋ ಕಾರಣಕ್ಕಾಗಿ ಈ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಜೈನ್ ಹಾಗೂ ಸಹಶಿಕ್ಷಕಿಯರಾದ ರಶ್ಮಿ ಭಟ್ ಮತ್ತು ನವ್ಯಾ ಈ ಮೂವರು ಶಿಕ್ಷಕಿಯರು ಓರ್ವ ವಿದ್ಯಾರ್ಥಿಗಾಗಿ ದೂರದ ಓಂಟೆಕಜೆ ಬೆಟ್ಟವೇರುತ್ತಿದ್ದಾರೆ. ಕಾರಣ, ಈ ಬೆಟ್ಟದಲ್ಲಿ ನೆಲೆಸಿರುವ ಮೂರು ಮಲೆಕುಡಿಯ ಜನಾಂಗದ ಕುಟುಂಬದಲ್ಲಿ ಓರ್ವ ಬಾಲಕ ಇದೇ ಪಣಪಿಲ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಆ ಕಾರಣಕ್ಕಾಗಿ ವಿದ್ಯಾರ್ಥಿಗೆ ಶಿಕ್ಷಣ ತಲುಪಿಸಲು ಮೂವರು ಶಿಕ್ಷಕಿಯರು ಸಾಹಸಗಾಥೆಯನ್ನೇ ಮೆರೆಯುತ್ತಿದ್ದಾರೆ.


ಬರೋಬ್ಬರಿ 10 ಕಿಲೋ ಮೀಟರ್ ಕಾಲ್ನಡಿಗೆ ಮೂಲಕ ಬೆಟ್ಟ, ಗುಡ್ಡ, ಕಲ್ಲು-ಬಂಡೆ,  ತೊರೆಗಳನ್ನ ದಾಟಿ ಸಾಗಬೇಕಿದೆ. ಮೊದಲೇ ಮೊಬೈಲ್ ನೆಟ್ ವರ್ಕ್, ವಿದ್ಯುತ್ ಸಂಪರ್ಕ ಸಹಿತ ಹಲವು ಮೂಲಭೂತ ಸೌಕರ್ಯದಿಂದ ವಂಚಿತವಾದ ಬೆಟ್ಟ ಪ್ರದೇಶವಿದು. ಬೆಳಿಗ್ಗೆ ಎಷ್ಟೇ ಬೇಗ ಹೊರಟರೂ ಇವರು ಬೆಟ್ಟ ತಲುಪೋ ಹೊತ್ತಿಗೆ ಸೂರ್ಯ ಹೆಚ್ಚು ಕಮ್ಮಿ ನೆತ್ತಿ ಮೇಲೆ ಇರುವನು. ಆದರೂ ಛಲಬಿಡದ ಶಿಕ್ಷಕಿಯರು ಕಳೆದ ಮೂರು ತಿಂಗಳಿನಿಂದ ವಾರಕ್ಕೊಮ್ಮೆ ಈ ಓಂಟೆಕಜೆ ಬೆಟ್ಟವೇರುತ್ತಿದ್ದಾರೆ. ಇವರಿಗೆ ಪಣಪಿಲ ಗ್ರಾಮದ ಸ್ಥಳೀಯರು ಹಾಗೂ ಅಡುಗೆ ಸಿಬ್ಬಂದಿ ವನಿತಾ ಅವರು ಸಾಥ್ ನೀಡುತ್ತಾರೆ. ಅಲ್ಲಿಗೆ ತೆರಳಿ ತಮ್ಮ ವಿದ್ಯಾರ್ಥಿ ಮಾತ್ರವಲ್ಲದೇ ಉಳಿದ ಮಕ್ಕಳಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಮೂವರು ಶಿಕ್ಷಕಿಯರ ಶಿಕ್ಷಣದ ಬಗೆಗಿನ ಕಾಳಜಿ ನಿಜಕ್ಕೂ ಮಾದರಿ ಎನ್ನಲೇಬೇಕು.

-ಇರ್ಷಾದ್ ಕಿನ್ನಿಗೋಳಿ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments