Saturday, May 28, 2022
Powertv Logo
HomePower Specialಬಾಡಿಸೂಟ್ ಹಾಕ್ಕೊಂಡು ಪಾಠ ಮಾಡಿದ ಟೀಚರ್! ಶಿಕ್ಷಕಿ ಐಡಿಯಾಕ್ಕೆ ನೆಟ್ಟಿಗರು ಫಿದಾ!

ಬಾಡಿಸೂಟ್ ಹಾಕ್ಕೊಂಡು ಪಾಠ ಮಾಡಿದ ಟೀಚರ್! ಶಿಕ್ಷಕಿ ಐಡಿಯಾಕ್ಕೆ ನೆಟ್ಟಿಗರು ಫಿದಾ!

ವಿದ್ಯಾರ್ಥಿಗಳಿಗೆ ಮಾನವ ದೇಹದೊಳಗಿನ ಅಂಗಾಂಗಗಳ ಬಗ್ಗೆ ಪಾಠ ಮಾಡುವಾಗ ಶಿಕ್ಷಕರು ಚಾರ್ಟ್ ಅಥವಾ ಗೊಂಬೆಗಳನ್ನು ಬಳಸೋದು, ಮಾನವನ ದೇಹದ ಮಾದರಿಗಳನ್ನು ಬಳಸಿಕೊಳ್ಳುತ್ತಾರೆ. ಆದರೆ, ಶಿಕ್ಷಕಿಯೊಬ್ಬರು ಎಲ್ಲರಿಗಿಂತ ಭಿನ್ನವಾಗಿ ಬಾಡಿಸೂಟ್ ಹಾಕಿಕೊಂಡು ಪಾಠ ಮಾಡಿದ್ದಾರೆ. ಸದ್ಯ ವಿದ್ಯಾರ್ಥಿಗಳಿಗಾಗಿ ಶಿಕ್ಷಕಿಯ ಹೊಸ ಗೆಟಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ಪೇನ್​​ನ 43 ವರ್ಷದ ಶಿಕ್ಷಕಿ ವೆರೋನಿಯಾ ಡೂಕ್​ ಈ ಹೊಸ ಪ್ರಯತ್ನ ಮಾಡಿ ಮೆಚ್ಚುಗೆಗೆ ಪಾತ್ರರಾದವರು. ಕಳೆದ 15 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ವೆರೋನಿಯಾ ಸೈನ್ಸ್, ಇಂಗ್ಲಿಷ್, ಆರ್ಟ್​, ಸೋಶಿಯಲ್ ಸ್ಟಡೀಸ್ ಹಾಗೂ ಸ್ಪಾನಿಶ್ ವಿಷಯಗಳನ್ನು ಪಾಠ ಮಾಡ್ತಾರೆ. ಕೆಲವು ದಿನಗಳ ಹಿಂದೆ ಇಂಟರ್​ನೆಟ್​ನಲ್ಲಿ ಸರ್ಚ್ ಮಾಡ್ತಿದ್ದಾಗ, ಮಾನವ ಅಂಗಗಳ ಚಿತ್ರವಿದ್ದ ಬಾಡಿ ಸೂಟ್ ಕಣ್ಣಿಗೆ ಬಿದ್ದಿದೆ. ಕೂಡಲೇ ತಾನೇಕೆ ಇದನ್ನು ಹಾಕಿಕೊಂಡು ಮಕ್ಕಳಿಗೆ ಪಾಠ ಮಾಡ್ಬಾರ್ದು ಅಂತ ಯೋಚ್ನೆ ಮಾಡಿದ ಅವರು ಕೂಡಲೇ ಅದನ್ನು ಬುಕ್ ಮಾಡಿ ಖರೀದಿಸಿದ್ದಾರೆ.
ವೆರೋನಿಯಾ ಬಾಡಿಸೂಟ್ ಹಾಕ್ಕೊಂಡು ಮಕ್ಕಳಿಗೆ ಪಾಠ ಮಾಡೋ ಫೋಟೋವನ್ನು ಪತಿ ಮೈಕ್ ಮೋರಟಿನೋಸ್ ಟ್ಟಿಟ್ಟರ್​ನಲ್ಲಿ ಶೇರ್​​ ಮಾಡಿದ್ದಾರೆ.  ಈ ಫೋಟೋಗಳು ಸಖತ್ ವೈರಲ್ ಆಗಿವೆ. 

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments