Sunday, June 26, 2022
Powertv Logo
Homeಸಿನಿಮಾ'ದಾಸ'ನ ಗರಡಿಯ ಹುಡುಗ ಚಂದನವನಕ್ಕೆ..! 'ಟಕ್ಕರ್' ಕೊಡೋಕೆ ರೆಡಿ ಆರಡಿ ಕಟೌಟ್​...

‘ದಾಸ’ನ ಗರಡಿಯ ಹುಡುಗ ಚಂದನವನಕ್ಕೆ..! ‘ಟಕ್ಕರ್’ ಕೊಡೋಕೆ ರೆಡಿ ಆರಡಿ ಕಟೌಟ್​…

ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಆರಡಿ ಕಟೌಟ್​ ತಲೆ ಎತ್ತಿ ನಿಲ್ಲಲು ರೆಡಿಯಾಗಿದೆ.  ಫಸ್ಟ್ ಸಿನಿಮಾದಲ್ಲೇ ಸ್ಟಾರ್​ ಪಟ್ಟ ಅಲಂಕರಿಸೋ ಸೂಚನೆಯನ್ನು ಯಂಗ್ & ಎನರ್ಜಿಟಿಕ್ ಆರಡಿ ಕಟೌಟ್ ನೀಡಿದ್ದಾರೆ. 

ಹೌದು, ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಆರಡಿ ಕಟೌಟ್​ ತಲೆ ಎತ್ತಲು ರೆಡಿಯಾಗಿದೆ. ಅದು ಅಂತಿಂಥಾ ಕಟೌಟ್​ ಅಲ್ಲ ದಾಸನ  ಗರಡಿಯ ಕಟೌಟ್​..! ಹೆಸರು ಮನೋಜ ಅಂತ..! ಈ ಯಂಗ್ ಹೀರೋ ಈಗ ‘ಟಕ್ಕರ್’ ಕೊಡಲು ಬರ್ತಿದ್ದಾರೆ.

ಮನೋಜ್​ ಬೇರೆ ಯಾರೂ ಅಲ್ಲ.. ದಾಸನ ಗರಡಿಯ ಹುಡುಗ ಅಂದಾಗಲೇ ನಿಮಗೆ ಗೊತ್ತಾಗಿರುತ್ತೆ. ನಿಮ್ಮ ನಿರೀಕ್ಷೆ ಸುಳ್ಳಲ್ಲ…ಮನೋಜ್​  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ..!

ಯಸ್, ಮನೋಜ್ ಅವರ ಚೊಚ್ಚಲ ಚಿತ್ರ ಟಕ್ಕರ್ ಸಿನಿಮಾ ಸೆಟ್ಟೇರಿದಲ್ಲಿಂದ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಚಿತ್ರದ ಪೋಸ್ಟರ್ ರಿಲೀಸ್ ಆದಾಗಲೇ ಮನೋಜ್ ಸ್ಯಾಂಡಲ್​ವುಡ್​​ನಲ್ಲಿ ಭದ್ರವಾಗಿ ನೆಲೆಯೂರುತ್ತಾರೆ ಅಂತ ಚಿತ್ರರಸಿಕರು, ಚಿತ್ರ ವಿಮರ್ಶಕರು ಭವಿಷ್ಯ ನುಡಿದು ಬಿಟ್ಟಿದ್ದರು.

ಇದೀಗ ಚಿತ್ರದ ಟೀಸರ್ ರಿಲೀಸ್ ಆಗಿದೆ. ಮನೋಜ್ ನಿರೀಕ್ಷೆಗೂ ಮೀರಿ ನಟಿಸಿರೋದು ಟೀಸರ್​ನಿಂದಲೂ ಪ್ರೂವ್ ಆಗಿದೆ. ಚೊಚ್ಚಲ ಸಿನಿಮಾ ಟಕ್ಕರ್​ ನಲ್ಲೇ ದಚ್ಚು ಸೋದರಳಿಯ ಸ್ಟಾರ್ ನಟರ ಸಾಲಲ್ಲಿ ನಿಲ್ಲೋದು ಕನ್ಫರ್ಮ್​.. ಇದರಲ್ಲಿ ನೋ ಡೌಟ್..!

‘ನೀನು ಟಕ್ಕರ್ ಕೊಡೋಕೆ ಬಂದಿರೋದು ಯಾರ್ ಜೊತೆ ಗೊತ್ತಾ? ದಾಸನ್ ಗರಡಿಯ ಹುಡುಗನ್ ಜೊತೆ’ ಅನ್ನೋ ಮಾಸ್​ ಡೈಲಾಗ್​  ಗೆ ಚಿತ್ರರಸಿಕರು ಫುಲ್ ಫಿದಾ ಆಗಿದ್ದಾರೆ. ಡಿ.ಬಾಸ್​ ಫ್ಯಾನ್ಸ್​ ಅಂತು ಫುಲ್ ಥ್ರಿಲ್ ಆಗಿದ್ದಾರೆ.

ರನ್ ಆ್ಯಂಟನಿ ಡೈರೆಕ್ಟರ್ ರಘುಶಾಸ್ತ್ರಿ ಟಕ್ಕರ್​ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಹುಲಿರಾಯ’ ಸಿನಿಮಾಕ್ಕೆ ಬಂಡವಾಳ ಹಾಕಿದ್ದ ನಾಗೇಶ್​ ಕೋಗಿಲು ‘ ಟಕ್ಕರ್​’ ಪ್ರೊಡ್ಯೂಸರ್.  ಹೀರೋ ಮನೋಜ್​ ಹೃದಯಕ್ಕೆ ಲವ್ ಅನ್ನೋ ಟಕ್ಕರ್ ಕೊಟ್ಟಿರೋದು ಪುಟ್ಟ ಗೌರಿ ಮದುವೆ ಖ್ಯಾತಿಯ ನಟಿ ರಂಜನ್ ರಾಘವನ್.

ಒಟ್ನಲ್ಲಿ ದರ್ಶನ್ ಅಳಿಯ ಮಾಸ್​ಲುಕ್​ನಲ್ಲಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಾ ಇದ್ದಾರೆ. ಟಕ್ಕರ್ ಕೊಡೋಕೆ ರೆಡಿಯಾಗಿದ್ದಾರೆ. ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ರಿಲೀಸ್​ ಗೆ ಒಂದಿಷ್ಟು ದಿನ ಕಾಯಲೇ ಬೇಕಾಗಿರೋದು ಅನಿವಾರ್ಯ.

 

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments