Tuesday, January 18, 2022
Powertv Logo
Homeವಿದೇಶವರ್ಲ್ಡ್ ಕಪ್ ನಲ್ಲಿ ಶುಭಾರಂಭ ಮಾಡಿದ ಟೀಮ್ ಇಂಡಿಯಾ..!

ವರ್ಲ್ಡ್ ಕಪ್ ನಲ್ಲಿ ಶುಭಾರಂಭ ಮಾಡಿದ ಟೀಮ್ ಇಂಡಿಯಾ..!

ವೆಸ್ಟ್ ಇಂಡೀಸ್ ನಲ್ಲಿ ಆರಂಭವಾಗಿರೋ ಮಹಿಳೆಯರ ಟಿ-20 ವರ್ಲ್ಡ್ ಕಪ್‌ ನ ಉದ್ಘಾಟನಾ ಪಂದ್ಯದಲ್ಲಿ ಟೀಮ್ಇಂಡಿಯಾ ಭರ್ಜರಿ ಜಯಭೇರಿ ಬಾರಿಸಿದೆ. ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್ ದಾಖಲೆಯ ಸೆಂಚುರಿ ಹಾಗೂ ತಂಡದ ಸಂಘಟಿತ ಹೋರಾಟದ ಮುಂದೆ ಮಂಕಾದ ನ್ಯೂಜಿಲೆಂಡ್ ಮಹಿಳೆಯರು ಟೀಮ್ಇಂಡಿಯಾಗೆ ಶರಣಾದರು.34 ರನ್ ಗಳ ಜಯ ಸಾಧಿಸಿದ ಭಾರತೀಯ ವನಿತೆಯರು ಟೂರ್ನಿಯಲ್ಲಿ ಶುಭಾರಂಭ ಮಾಡಿದ್ರು.

ಹರ್ಮನ್ ಪ್ರೀತ್ ಅಬ್ಬರಕ್ಕೆ ಕಿವೀಸ್ ಕಂಗಾಲು..!

ಟೀಮ್ಇಂಡಿಯಾ ನಾಯಕಿ ಕೌರ್ ಕೇವಲ 51 ಎಸೆತಗಳಲ್ಲಿ 7 ಬೌಂಡರಿ,8 ಸಿಕ್ಸರ್ ನೆರವಿನಿಂದ ಅಮೋಘ ಶತಕ‌ ಸಿಡಿಸಿದ್ರು. ಇದು ಇಂಟರ್ ನ್ಯಾಷನಲ್ ಟಿ20 ಮ್ಯಾಚ್ ನಲ್ಲಿ ಭಾರತದ ಪರ ದಾಖಲಾದ ಮೊದಲ ಶತಕವೂ ಹೌದು..!
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ಆರಂಭಿಕ ಆಘಾತ ಎದುರಿಸಿತು. ಆದ್ರೆ , ಹರ್ಮನ್ ಪ್ರೀತ್ ಕೌರ್ ಅವರ ಸೆಂಚುರಿ ಹಾಗೂ ಜೆಮಿಮಾ ರೊಡ್ರಿಗಸ್ ರವರ ಹಾಫ್ ಸೆಂಚುರಿಯಿಂದ ಇಂಡಿಯಾ ನಿಗಧಿತ ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಮಾಡಿತು.

195 ರನ್ ಗಳ ಟಾರ್ಗೆಟ್ ಬೆನ್ನತ್ತಿದ ನ್ಯೂಜಿಲೆಂಡ್ ಭಾರತದ ಸಂಘಟಿತ ದಾಳಿಯ ಮುಂದೆ ಮಂಕಾಯ್ತು. ಪರಿಣಾಮವಾಗಿ ನಿಗಧಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಶಕ್ತವಾಯಿತು.

-ವಸಂತ್ ಮಳವತ್ತಿ, ಸ್ಪೋರ್ಟ್ಸ್ ಬ್ಯೂರೋ ಪವರ್ ಟಿವಿ

LEAVE A REPLY

Please enter your comment!
Please enter your name here

- Advertisment -

Most Popular

Recent Comments