Homeಸಿನಿ ಪವರ್ಕಾಲಿವುಡ್'ಸೈರಾ' ಸಿನಿಮಾದ ಕನ್ನಡ ಟೀಸರ್ ಬಿಡುಗಡೆ - ಸಿನಿಮಾ ರಿಲೀಸ್ ಡೇಟ್ ಅನೌನ್ಸ್..!

‘ಸೈರಾ’ ಸಿನಿಮಾದ ಕನ್ನಡ ಟೀಸರ್ ಬಿಡುಗಡೆ – ಸಿನಿಮಾ ರಿಲೀಸ್ ಡೇಟ್ ಅನೌನ್ಸ್..!

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷಿತ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕನ್ನಡದಲ್ಲೂ ತೆರೆಕಾಣುವುದು ಪಕ್ಕಾ ಆಗಿದೆ. ಇಂದು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಅಕ್ಟೋಬರ್ 2ರಂದು ಸಿನಿಮಾ ತೆರೆ ಕಾಣುತ್ತಿದ್ದು, ಬಿಡುಗಡೆಯಾಗಿರುವ ಪಂಚ ಭಾಷಾ ಟೀಸರ್​ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಇನ್ನು ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ನಟಿಸಿದ್ದು ಕನ್ನಡದ ಅಭಿಮಾನಿಗಳು, ಚಿತ್ರರಸಿಕರು ಸಿನಿಮಾ ಬಿಡುಗಡೆಗೆ ವ್ಹೇಟ್ ಮಾಡ್ತಿದ್ದಾರೆ. ಸುದೀಪ್ ಅವರಲ್ಲದೆ ಅಮಿತಾಭ್​ ಬಚ್ಚನ್​, ವಿಜಯ್ ಸೇತುಪತಿ, ತಮನ್ನಾ, ನಯನಾತಾರ , ಜಗಪತಿ ಬಾಬು ಮತ್ತಿತರರು ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments