Home ಸಿನಿ ಪವರ್ ಅಖಾಡಕ್ಕಿಳಿದ ಸೈರಾ ನರಸಿಂಹ ರೆಡ್ಡಿ - ಹೇಗಿದೆ ಗೊತ್ತಾ ಸುದೀಪ್​​ ಖದರ್?

ಅಖಾಡಕ್ಕಿಳಿದ ಸೈರಾ ನರಸಿಂಹ ರೆಡ್ಡಿ – ಹೇಗಿದೆ ಗೊತ್ತಾ ಸುದೀಪ್​​ ಖದರ್?

ಸೈರಾ ನರಸಿಂಹ ರೆಡ್ಡಿ ಅಖಾಡಕ್ಕೆ ಇಳಿದಾಗಿದೆ.. ಪಂಚ ಭಾಷೆಗಳಲ್ಲಿ ಸೈರಾ ನರಸಿಂಹ ರೆಡ್ಡಿ ಗೆಟಪ್​ನಲ್ಲಿ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅಬ್ಬರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕನ್ನಡಿಗ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವುಕು ರಾಜ ಅವತಾರದಲ್ಲಿ ಸಿನಿರಸಿಕರ ಮನ ಗೆದ್ದಿದ್ದಾರೆ.
2017ರಲ್ಲಿ ರಿಲೀಸ್ ಆದ ‘ಖೈದಿ ನಂ150’ ಸಿನಿಮಾ ಬಳಿಕ ಚಿರಂಜೀವಿ ಅಭಿನಯದ ಒಂದೇ ಒಂದು ಸಿನಿಮಾ ಬಂದಿರ್ಲಿಲ್ಲ. 2 ವರ್ಷದ ಬಳಿಕ ಚಿರು ತೆಲುಗು ಜೊತೆ ಜೊತೆಗೆ ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲಿ ‘ಸೈರಾ’ ಹಬ್ಬದೂಟ ಉಣಬಡಿಸುತ್ತಿದ್ದಾರೆ. ವಿಶ್ವದಾದ್ಯಂತ ಸುಮಾರು 3,500 ಥಿಯೇಟರ್​ಗಳಲ್ಲಿ ಸೈರಾ ದರ್ಬಾರು ಶುರುವಾಗಿದೆ. ಬಾಕ್ಸ್​ ಆಫೀಸಲ್ಲಿ ದಾಖಲೆಯ ಕಲೆಕ್ಷನ್ ಮಾಡುವತ್ತಾ ಸೈರಾ ಮುಂದಡಿ ಇಟ್ಟಿದ್ದಾನೆ.
ಸುದೀಪ್ ಅಭಿಮಾನಿಗಳಿಗಂತೂ ಊರ ಹಬ್ಬವೋ ಹಬ್ಬ.. ಈಗಾಗಲೇ ಕಿಚ್ಚನ ಪೈಲ್ವಾನ್​ ವಿಶ್ವ ವ್ಯಾಪಿ ಸೌಂಡು ಮಾಡ್ತಿದೆ. ಈ ನಡುವೆ ಇಂದು ಸೈರಾ ನರಸಿಂಹ ರೆಡ್ಡಿ ರಿಲೀಸ್ ಆಗಿದೆ. ಅವುಕು ರಾಜ ಅನ್ನುವ ಪ್ರಮುಖ ಪಾತ್ರದಲ್ಲಿ, ಡಿಫ್ರೆಂಟ್​ ಲುಕ್, ಖದರ್​ನಲ್ಲಿ ಬಾದ್​ ಷಾ ಸುದೀಪ್ ಮಿಂಚಿದ್ದಾರೆ. ಹೀಗಾಗಿ ಕನ್ನಡಿಗರೂ ಸೈರಾ ಹತ್ತಿರವಾಗಿದ್ದಾನೆ.
ಬೆಂಗಳೂರಿನ ವಿವಿಧ ಥಿಯೇಟರ್​ಗಲ್ಲಿ ಸೈರಾ ರಿಲೀಸ್ ಆಗಿದೆ. ಊರ್ವಶಿ ಥಿಯೇಟರ್​ನಲ್ಲಿ ಮಿಡ್​ನೈಟ್ ಶೋನೇ ಹೌಸ್​ಫುಲ್ ಆಗಿತ್ತು. ಎಂಜಿ ರಸ್ತೆಯಲ್ಲಿರೋ ಶಂಕರ್​ನಾಗ್ ಥಿಯೇಟರ್​ಗೆ ಬೆಳಗಿನ ಜಾವ 3.30ಕ್ಕೇ ಸೈರಾ ನರಸಿಂಹ ರೆಡ್ಡಿ ಎಂಟ್ರಿ ಕೊಟ್ಟಿದ್ದು, ಇಲ್ಲಿ ಹೊಸ ಡಿಜಿಟಲ್​ ತಂತ್ರಜ್ಞಾನದ ಥಿಯೇಟರ್​ ಆಗಿರೋದ್ರಿಂದ ಆರಂಭದ ಶೋಗಳಿಗೆ ಟಿಕೆಟ್​ ಬೆಲೆ 1200 ರೂ ಫಿಕ್ಸ್​ ಮಾಡಲಾಗಿತ್ತು. ನಂತರದ ಶೋಗಳ ಟಿಕೆಟ್​ಗೆ 350 ರೂ ನಿಗದಿಪಡಿಸಲಾಗಿದೆ.
ಸುರೇಂದ್ರ ರೆಡ್ಡಿ ಆ್ಯಕ್ಷನ್ ಕಟ್​ ಹೇಳಿರುವ ಸೈರಾ ನರಸಿಂಹ ರೆಡ್ಡಿಗೆ ಬಂಡವಾಳ ಹಾಕಿರೋದು ರಾಮ್​ಚರಣ್. ಸ್ವಾಂತಂತ್ರ್ಯ ಪೂರ್ವದಲ್ಲಿ ಅಧಿಕ ಸುಂಕವನ್ನು ವಿರೋಧಿಸಿ ಬ್ರಿಟಿಷರನ್ನು ಇನ್ನಿಲ್ಲದಂತೆ ಸಿಂಹಸ್ವಪ್ನವಾಗಿ ಕಾಡಿದ್ದ ರಾಯಲ ಸೀಮೆಯ ನಾಯಕ ಸೈರಾ ನರಸಿಂಹ ರೆಡ್ಡಿಯ ಕಥೆಯೇ ಈ ಸಿನಿಮಾ.
 ಚಿರಂಜೀವಿ, ಸುದೀಪ್ ಮಾತ್ರವಲ್ಲದೆ ಬಾಲಿವುಡ್​ ಬಿಗ್ ಬಿ ಅಮಿತಾಬ್ ಬಚ್ಚನ್, ವಿಜಯ್ ಸೇತುಪತಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ನಿಹಾರಿಕಾ, ತ್ರಿವೇಣಿ ಸೇರಿದಂತೆ ಬಹು ದೊಡ್ಡ ತಾರಾಗಣ ಇದ್ದು, ಅಮಿತ್​ ತ್ರಿವೇದಿ ಸಂಗೀತ, ಆರ್​.ರತ್ನವೇಲು ಸಿನಿಮಾಟೋಗ್ರಫಿ ಸೈರಾ ನರಸಿಂಹ ರೆಡ್ಡಿಗೆ ಬಲ ತುಂಬಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಪಂಚ ಭಾಷಾ ನೇಟಿವಿಟಿಗೆ ತಕ್ಕಂತೆ ಚಿತ್ರ ಮೂಡಿಬಂದಿದ್ದು, ಚಿತ್ರ ನೋಡಿದವರು ಫುಲ್ ಮಾರ್ಕ್ಸ್ ಕೊಡ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಸಚಿನ್ ಗೆ ಸೆಡ್ಡುಹೊಡೆದ ಕನ್ನಡಿಗ ರಾಹುಲ್ ದ್ರಾವಿಡ್ !

ಕನ್ನಡಿಗ ರಾಹುಲ್ ದ್ರಾವಿಡ್ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಸೆಡ್ಡು ಹೊಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ದ್ರಾವಿಡ್ಡೇ ದಿ ಬೆಸ್ಟ್ ಅಂತ ಜನ ಮತಹಾಕಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗಿಂತ...

ಕೊರೋನಾ ಇದ್ರೂ ಕಾರ್ಖಾನೆ ಸೀಲ್​ಡೌನ್​ ಯಾಕಿಲ್ಲ? ಐಟಿಸಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ದೇವನಹಳ್ಳಿ : ಬೆಂಗಳೂರು ಹೊರವಲಯದ ಯಲಹಂಕ ತಾಲೂಕು ತರಬಹಳ್ಳಿ ಗ್ರಾಮದ ಸಮೀಪವಿರುವ ಪ್ರತಿಷ್ಠಿತ ಐಟಿಸಿ ಕಂಪನಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಐಟಿಸಿ ಕಾರ್ಖಾನೆಯಲ್ಲಿ ಸಿಗರೇಟ್ ತಯಾರಿಕೆ ಮಾಡಲಾಗುತ್ತಿದ್ದು ಈ ಕಾರ್ಖಾನೆಯಲ್ಲಿ...

ಕೊವಿಡ್ ಸೋಂಕಿತರ ಭೇಟಿ ಮಾಡಿ ಧೈರ್ಯ ತುಂಬಿದ ಸಚಿವ ಆನಂದ್ ಸಿಂಗ್ !!

ಬಳ್ಳಾರಿ : ಬಳ್ಳಾರಿಯ ದಂತ ವೈದ್ಯ ಕಾಲೇಜಿನ ಕೊವಿಡ್ ಅಸ್ಪತ್ರೆಗೆ ಉಸ್ತುವಾರಿ ಮತ್ತು ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನಿಡಿದರು. ಪಿಪಿಇ ಕಿಟ್ ಧರಿಸಿ ಐಸೋಲೇಷನ್ ವಾರ್ಡ್ ಗೆ ಭೇಟಿ ಕೊಟ್ಟ...

ಕೊರೋನಾ ಟೆಸ್ಟ್ ಗಾಗಿ ಶವ ಕೊಳೆಯಲು ಬಿಟ್ಟ ಬ್ರಹ್ಮಾವರ ಸರಕಾರಿ ಆಸ್ಪತ್ರೆ

ಉಡುಪಿ : ಕೊರೋನಾ ವಕ್ಕರಿಸಿದ ಬಳಿಕ ಮಾನವೀಯತೆ ಮರೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದು ನಿಜ ಎನ್ನುವದನ್ನು ಬ್ರಹಾವ್ಮರ ಸಮುದಾಯ ಆರೋಗ್ಯ ಕೇಂದ್ರ ಸಾಬೀತು ಮಾಡಿದೆ ಎಂದರೆ ತಪ್ಪಾಗಲಾರದು. ಕೊರೋನಾ ವಿಚಾರವಾಗಿ...