ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸೆಟ್ಟೇರಿದಲ್ಲಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಭಾರಿ ಸುದ್ದಿಯಲ್ಲೇ ಇದೆ. ಕನ್ನಡದಲ್ಲೂ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಕನ್ನಡದಲ್ಲೂ ಈ ಸಿನಿಮಾ ಮೇಲೆ ಅಷ್ಟೊಂದು ಕ್ರೇಜ್ ಹುಟ್ಟಲು ಕಾರಣ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಸೈರಾದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಎಲ್ರಿಗೂ ಗೊತ್ತೇ ಇರೋ ವಿಷ್ಯ. ಈಗ ಇದೇ ಕಾರಣಕ್ಕೆ ಕರ್ನಾಟಕದಲ್ಲೂ ಚಿತ್ರಕ್ಕೆ ಭಾರಿ ಬೇಡಿಕೆ ಸೃಷ್ಠಿಯಾಗಿದೆ.
ಹೌದು, ರಾಜ್ಯದಲ್ಲಿ ಈ ಚಿತ್ರ ಭಾರಿ ಮೊತ್ತಕ್ಕೆ ಬಿಕರಿಯಾಗಿದೆ. ಧೀರಜ್ ಎಂಟರ್ಪ್ರೈಸಸ್ನವರು ಸಿನಿಮಾವನ್ನು ಬರೋಬ್ಬರಿ 32 ಕೋಟಿ ರೂಗಳಿಗೆ ವಿತರಣೆ ಹಕ್ಕು ಪಡೆದಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತಕ್ಕೆ ಪರ ಭಾಷಾ ಚಿತ್ರದ ವಿತರಣೆಯಾಗಿರುವುದು ಇದೇ ಮೊದಲು.
ಇನ್ನು ಚಿರಂಜೀವಿ, ಸುದೀಪ್ ಅವರಲ್ಲದೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ವಿಜಯ್ ಸೇತುಪತಿ ಮತ್ತಿತರರ ಸ್ಟಾರ್ಗಳು ನಟಿಸುತ್ತಿದ್ದಾರೆ.