ಐದು ಮದ್ವೆ ಆಗ್ದಿದ್ರೆ ಜೈಲೇ ಗತಿ..!

0
203

ಲೈಫ್​ನಲ್ಲಿ ಮದ್ವೆ, ಸಂಸಾರ ಅನ್ನೋದೆಲ್ಲಾ ಕಾಮನ್. ಜೀವನ ಅಂದ್ಮೇಲೆ ಮದ್ವೆ-ಗಿದ್ವೆ, ಹೆಂಡ್ತಿ-ಮಕ್ಳು ಅಂತ ಇರಲೇ ಬೇಕು. ಆದ್ರೆ, ನಮ್ಮಲ್ಲಿ ಕೆಲವರು ಮದ್ವೆ ಆಗುವುದೇ ಇಲ್ಲ. ಹುಡ್ಗಿ ಸಿಗ್ದೆ ಮದ್ವೆ ಆಗ್ದೇ ಇರೋದು ಬಿಟ್ಟಾಕಿ, ಕೆಲವ್ರು ಹುಡ್ಗಿ ಸಿಕ್ಕರೂ ಮದ್ವೆ ಆಗೋಕೆ ರೆಡಿ ಇರಲ್ಲ. ಸಾಯೋವರೆಗೂ ಅವಿವಾಹಿತನಾಗಿಯೇ ಇರ್ತೀನಿ ಅಂತ ಇರೋರು ಬೇಜಾನ್ ಮಂದಿ ನಮ್ ನಡುವೆ ಇದ್ದಾರೆ.

ಆದ್ರೆ ಅಲ್ಲಿ ನೀವು ಮದ್ವೆ ಆಗಲ್ಲ ಅಂತ ಹೇಳೋದಿರಲಿ, ಒಂದು ಮದ್ವೆ ಆದ್ರೂ ಕಷ್ಟವೇ..! ಕನಿಷ್ಠ 5 ಮಂದಿಯನ್ನಾದ್ರೂ ಮದ್ವೆ ಆಗಲೇ ಬೇಕು. ಅಕಸ್ಮಾತ್ ನೀವು 5 ಮದ್ವೆ ಆಗ್ದೇ ಇದ್ರೆ ನಿಮಗೆ ಅಲ್ಲಿ ಜೈಲೇ ಗತಿ..! 

ಅರೆ, ಒಂದಲ್ಲ, ಎರಡಲ್ಲ ಐದು ಮದ್ವೆ ಆಗ್ಬೇಕ..? ಹೌದು, ಇದು ಸ್ವಾಜಿಲ್ಯಾಂಡ್ ದೊರೆಯ ಹೊಸ ಆದೇಶ..! ಸ್ವಾಜಿಲ್ಯಾಂಡ್​ನ ರಾಜ 3ನೇ ಮಾಸ್ವತಿ ಇಂಥಾ ಒಂದು ವಿಚಿತ್ರ ಆದೇಶವನ್ನು ಹೊರಡಿಸಿದ್ದಾರೆ. ಇದೇ ಜೂನ್ (2019) ನಿಂದ ಸ್ವಾಜಿಲ್ಯಾಂಡ್​ನಲ್ಲಿ ಪ್ರತಿಯೊಬ್ಬ ಪುರುಷ ಕನಿಷ್ಠ 5 ಮದುವೆಯನ್ನು ಆಗಲೇ ಬೇಕು. ಐದು ಮದುವೆ ಆಗದೇ ಇದ್ದರೆ ಸರ್ಕಾರ ಅಂತವರಿಗೆ ಜೀವಾವಧಿ ಶಿಕ್ಷೆ ವಿಧಿಸುತ್ತದೆಯಂತೆ..!
ಅಷ್ಟೇ ಅಲ್ಲದೆ ಐದಕ್ಕಿಂತ ಹೆಚ್ಚು ಮದ್ವೆ ಆಗೋ ಪುರುಷರಿಗೆ ಸರ್ಕಾರದಿಂದಲೇ ಆರ್ಥಿಕ ಸಹಾಯ ಸಿಗಲಿದೆ ಅಂತಲೂ ಕಿಂಗ್ ತಿಳಿಸಿದ್ದಾರೆ. ಅಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿದ್ದು, ಸಮತೋಲನ ಸಾಧಿಸೋ ದೃಷ್ಟಿಯಿಂದ ಇಂಥಾ ನಿರ್ಧಾರ ತೆಗೆದುಕೊಂಡಿದ್ದಾರೆ ಅಂತ ತಿಳಿದುಬಂದಿದೆ.
ಅಲ್ಲಿನ ರಾಜ ಕೂಡ 15 ಮಂದಿ ಪತ್ನಿಯರನ್ನು, 25 ಮಕ್ಕಳನ್ನು ಹೊಂದಿದ್ದಾರೆ. ರಾಜ ತಂದೆ ಬರೋಬ್ಬರಿ 70 ಪತ್ನಿಯರನ್ನು 150 ಮಕ್ಕಳನ್ನು ಹೊಂದಿದ್ದರಂತೆ..!

LEAVE A REPLY

Please enter your comment!
Please enter your name here