ಬೆಂಗಳೂರು: ನಮ್ಮ ಮೆಟ್ರೋ ಯೋಜನೆಯ 2ನೇ ಹಂತದಲ್ಲಿ ಕನಕಪುರ ರಸ್ತೆಯ ಯಲಚೇನಹಳ್ಳಿಯಿಂದ ಅಂಜನಪುರ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದೆ. ಇದೇ ವಿಸ್ತರಿತ ಮಾರ್ಗದಲ್ಲಿ ಮೊದಲ ರೈಲು ಜನವರಿ 14 ರಂದು ಸಂಚಾರ ಆರಂಭಿಸಲಿದೆ. ಸಿಎಂ ಬಿಎಸ್ವೈ, ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಚಾಲನೆ ನೀಡಲಿದ್ದಾರೆ.
ಯಲಚೇನಹಳ್ಳಿಯಿಂದ ಅಂಜಾನಪುರ ಮಾರ್ಗ ಸುಮಾರು 500 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 6.29 ಕಿ.ಮೀ ಉದ್ದದ ಮಾರ್ಗದಲ್ಲಿ ಕೋಣಕುಂಟೆ ಕ್ರಾಸ್, ಕೃಷ್ಣ ಲೀಲಾ ಪಾರ್ಕ್, ವಾಜರಹಳ್ಳಿ, ತಲಗಟ್ಟಪುರ, ಅಂಜಾನಪುರ ಟೌನ್ಶಿಪ್ ಬರಲಿವೆ. ವಿಸ್ತರಿತ ಮಾರ್ಗದಲ್ಲಿ 5 ಎಲಿವೇಟೆಡ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಜನವರಿ 15 ರಿಂದ ಮೆಟ್ರೋ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಕನಕಪುರ ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ಬಳಲುತ್ತಿದ್ದ ಜನರಿಗೆ ಮೆಟ್ರೋ ಸಂಚಾರ ಕೊಂಚ ರಿಲೀಫ್ ನೀಡಲಿದೆ.
ಇನ್ನೂ ಮೆಟ್ರೋ ಕಾಮಗಾರಿಯಲ್ಲಿ ಸಿವಿಲ್ ಕಾಮಗಾರಿ, ಹಳಿ ಜೋಡಣೆ ಕಾರ್ಯ ಸಂಪೂರ್ಣವಾಗಿ ಮುಗಿದಿವೆ. ಒಳಾಂಗಣ ವಿನ್ಯಾಸದ ಕೆಲಸಗಳು ಸಹ ಮುಗಿದಿವೆ. ಇನ್ನೂ ಈ ಮಾರ್ಗದ ಮೆಟ್ರೋ ಸಂಚಾರ ಕೆಲವೇ ದಿನಗಳು ಬಾಕಿ ಉಳಿದಿವೆ. ಒಟ್ಟಿನಲ್ಲಿ ಈ ಮಾರ್ಗದ ಜನರ ಬಹು ದಿನಗಳ ಕನಸು ನನಸಾಗುತ್ತಿದೆ.