ಹುಬ್ಬಳ್ಳಿ: ಹಗಲು ರಾತ್ರಿ ಎನ್ನದೇ ಸದಾ ಯಾವಾಗಲೂ ಆ ಕೆಲಸ ಈ ಕೆಲಸ ಎನ್ನುತ್ತಾ ಬಿಡುವಿಲ್ಲದೇ ಕಾರ್ಯ ನಿರ್ವಹಿಸುತ್ತಿದ್ದ ಹುಬ್ಬಳ್ಳಿ ಧಾರವಾಡ ಪೊಲೀಸ್ ಸಿಬ್ಬಂದಿಗೆ ಕೊನೆಗೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಭರ್ಜರಿ ಕೊಡುಗೆ ನೀಡಿದ್ದಾರೆ.
ಖಾಕಿ ಬಟ್ಟೆ ಹಾಕಿಕೊಂಡು ಸದಾ ಸಾರ್ವಜನಿಕ ಸೇವೆಯಲ್ಲಿರುವ ಪೊಲೀಸ್ ಪಡೆಗೆ ಈಗ ಆಯುಕ್ತರ ನಿರ್ಧಾರ ವರ್ಷವನ್ನುಂಟು ಮಾಡಿದೆ. ರಾಜ್ಯದಲ್ಲಿಯೇ ಸಾಕಷ್ಟು ಸದ್ದು ಮಾಡಿರುವ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಗೆ ಖಡಕ್ ಅಧಿಕಾರಿಗೆ ಎಂದೇ ಖ್ಯಾತಿ ಪಡೆದ ಲಾಬುರಾಮ್ ಅವರು ಆಗಮಿಸುತ್ತಿದ್ದಂತೇ ಸಾಕಷ್ಟು ಬದಲಾವಣೆಗಳಾಗಿವೆ. ಈ ನಿಟ್ಟಿನಲ್ಲಿ ಹು-ಧಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಕೂಡ ಸಿಕ್ಕಂತಾಗಿದೆ. ಸದಾ ಯಾವಾಗಲೂ ಕರ್ತವ್ಯದಲ್ಲಿರುತ್ತಾ ಮನೆಯವರೊಂದಿಗೆ ಕಾಲ ಕಳೆಯಲು ಆಗದಂತ ಪರಿಸ್ಥಿತಿಯಲ್ಲಿ ಇದ್ದ ಅವಳಿ ನಗರದ ಪೊಲೀಸರಿಗೆ ಪೋಲಿಸ್ ಆಯುಕ್ತರು ಸಿಹಿ ಸುದ್ದಿ ನೀಡಿದ್ದಾರೆ.
ಕಳೆದ ಹಲವು ದಿನಗಳಿಂದ ಸಾಕಷ್ಟು ಪ್ರಮಾಣದಲ್ಲಿ ವಾರದ ರಜೆ ಎನ್ನುತ್ತಾ ಒಂದು ದಿನವೂ ಕುಟುಂಬದೊಂದಿಗೆ ಕಾಲ ಕಳೆಯದೇ ಸದಾ ಯಾವಾಗಲೂ ಕೆಲಸ ಕೆಲಸ ಏನ್ನುತ್ತಿದ್ದ ತಮ್ಮ ಇಲಾಖೆಯ ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಆಯುಕ್ತರು ಭರ್ಜರಿ ಕೊಡುಗೆ ನೀಡಿದ್ದಾರೆ. ಹಬ್ಬದ ದಿನಗಳಲ್ಲಿ ಬೇರೆ ಇಲಾಖೆಯ ಅಧಿಕಾರಿಗಳು ಮನೆಯವರ ಜೊತೆ ಹಾಯಾಗಿ ಹಬ್ಬವನ್ನು ಆಚರಣೆ ಮಾಡ್ತಾರೆ. ಅಷ್ಟೇ ಅಲ್ಲದೇ ಪ್ರತಿ ರವಿವಾರ ವಾರದ ರಜೆ ಕೂಡ .ಆದರೆ ನಮ್ಮ ಪೊಲೀಸ್ ಇಲಾಖೆ ಸಿಬ್ಬಂದಿಗಳು ಮಾತ್ರ ಮನೆಯವರೊಂದಿಗೆ ಇರದೇ ಆ ಕೆಲಸ ಈ ಕೆಲಸ ಎನ್ನುತ್ತಾ ಕರ್ತವ್ಯದಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿಯಲ್ಲಿದ್ದ ನೌಕರರಿಗೆ ಕೊನೆಗೂ ಆಯುಕ್ತರು ವಾರದ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.
ಪೊಲೀಸರು ಕೂಡಾ ಮನುಷ್ಯರೇ ಅವರಿಗೆ ಕೂಡಾ ಕುಟುಂಬ ಅನ್ನೋದು ಇರುತ್ತೆ ಎಂದುಕೊಂಡು ಇವರು ಕೂಡಾ ಕುಟುಂಬದೊಂದಿಗೆ ಕಾಲವನ್ನು ಕಳೆಯಬೇಕು. ಕುಟುಂಬಕ್ಕೂ ಕೂಡಾ ಒಂದು ದಿನ ಮಿಸಲಿಡಲಿ ಎಂಬ ಕಾರಣಕ್ಕೆ ಕಡ್ಡಾಯವಾಗಿ ವಾರದ ರಜೆಯನ್ನು ನೀಡುವಂತೆ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ಆಯುಕ್ತರ ಈ ಒಂದು ಹೊಸ ಆದೇಶದಿಂದ ಅವಳಿ ನಗರದ ಪೊಲೀಸ್ ಸಿಬ್ಬಂದಿ ಯಲ್ಲಿ ಹೊಸ ಮಂದಹಾಸ ಮೂಡಿದೆ. ಈ ಕುರಿತಂತೆ ಪೊಲೀಸ್ ಸಿಬ್ಬಂದಿ ಸಾಕಷ್ಟು ಪ್ರಮಾಣದಲ್ಲಿ ವಾರದ ರಜೆ ಕುರಿತಂತೆ ತಮ್ಮ ನೋವನ್ನು ಹೇಳಿಕೊಂಡರು ಯಾವ ಪೊಲೀಸ್ ಆಯುಕ್ತರು ಸ್ಪಂದಿಸಿರಲಿಲ್ಲ. ಕೊನೆಗೂ ಲಾಬೂರಾಮ್ ಅವರು ಕೊನೆಗೂ ಹೊಸದಾದ ಆದೇಶವನ್ನು ನೀಡಿ ಅವಳಿ ನಗರದ ಪೊಲೀಸರಿಗೆ ಹೊಸ ವರ್ಷದ ಗಿಪ್ಟ್ ನೀಡಿದ್ದಾರೆ.