ಟ್ವಿಟರ್​​ ಫಾಲೋವರ್ಸ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದರು ಸುಷ್ಮಾ ಸ್ವರಾಜ್..!

0
126

ರಾಷ್ಟ್ರ ರಾಜಕಾರಣದ ಧೀಮಂತ ನಾಯಕಿ, ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್​ ಇನ್ನು ನೆನಪು ಮಾತ್ರ. ಅವರಿಲ್ಲದ ಈ ಹೊತ್ತಲ್ಲಿ ಅವರ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಳ್ಳುವ ಕೆಲಸವಾಗುತ್ತಿದೆ. ಸುಷ್ಮಾ ಅವರ ನೆನಪಿನಲ್ಲಿ ಅವರ ಸಾಧನೆಗಳ ಮೆಲುಕು ಹಾಕುವ ಕಾರ್ಯವಾಗುತ್ತಿದೆ.
ಸುಷ್ಮಾ ಸ್ವರಾಜ್​ ಭಾರತೀಯರ ಜನಪ್ರಿಯತೆಯನ್ನು ಮಾತ್ರವಲ್ಲದೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಜನರ ಪ್ರೀತಿಗೂ ಪಾತ್ರರಾಗಿದ್ರು. ಅದಕ್ಕೆ ಸಾಕ್ಷಿ ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದು..! ಟ್ವಿಟರ್​ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದ ಮಹಿಳಾ ರಾಜಕಾರಣಿಗಳ ಪಟ್ಟಿಯಲ್ಲಿ ನಮ್ಮ ಸುಷ್ಮಾ ಸ್ವರಾಜ್​ ನಂಬರ್ 1 ಸ್ಥಾನದಲ್ಲಿದ್ರು.
2018ರಲ್ಲಿ ಟ್ವಿಪ್ಲೊಮಸಿ ಸಂಸ್ಥೆ ಮಾಡಿದ ಸೋಶಿಯಲ್ ಮೀಡಿಯಾ ಸರ್ವೆ ಈ ವಿಷ್ಯವನ್ನು ಹೇಳಿದೆ. ಟ್ವಿಟರ್​ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಾಯಕರ ಪಟ್ಟಿಯನ್ನು ಟಿಪ್ಲೊಮಸಿ ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ಮಹಿಳಾ ರಾಜಕಾರಣಿಗಳ ಪೈಕಿ 13.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಸುಷ್ಮಾ ಸ್ವರಾಜ್​ ಮೊದಲ ಸ್ಥಾನದಲ್ಲಿದ್ರು. 10 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಜೋರ್ಡಾನ್​ನ ರಾಣಿ ಕ್ವೀನ್ ರಾನಿಯಾ ಅಲ್​ ಅಬ್ದುಲ್ಲಾ ಎರಡನೇ ಸ್ಥಾನದಲ್ಲಿದ್ರು. ಪುರುಷ ಮತ್ತು ಮಹಿಳಾ ನಾಯಕರ ಒಟ್ಟಾರೆ ಪಟ್ಟಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಸ್ಥಾನದಲ್ಲಿ, ನಮ್ಮ ಪ್ರಧಾನಿ ನರೇಂದ್ರ ಮೋದಿ ತೃತೀಯ ಸ್ಥಾನದಲ್ಲಿಯೂ ಹಾಗೂ ಸುಷ್ಮಾ ಸ್ವರಾಜ್​ 8ನೇ ಸ್ಥಾನದಲ್ಲಿಯೂ ಇದ್ರು.

ಮಮತಾಮಯಿ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬಂದಿದ್ದ ಅಪರೂಪದ ಫೋಟೋಗಳು

ಕನ್ನಡಿಗರಲ್ಲದಿದ್ದರೂ ಕರುನಾಡ ಮಗಳಾಗಿದ್ದರು ಸುಷ್ಮಾ ಸ್ವರಾಜ್..!

ಮಾತೃ ಹೃದಯಿ ನಾಯಕಿಯ ಅಗಲಿಕೆಗೆ ಪ್ರಧಾನಿ ಮೋದಿ ಕಂಬನಿ

ಇಲ್ಲಿವೆ ಅಜಾತಶತ್ರು ಸುಷ್ಮಾ ಸ್ವರಾಜ್​ರವರ ಅಪರೂಪದ ಫೋಟೋಗಳು

ಚತುರ ನಾಯಕಿಯ ಹೆಜ್ಜೆ ಗುರುತು – ಹೇಗಿತ್ತು ಗೊತ್ತಾ ಸುಷ್ಮಾ ಸ್ವರಾಜ್​ ಬದುಕಿನ ಹಾದಿ?

‘ನಾನು ಜೀವನವಿಡಿ ಈ ದಿನಕ್ಕೆ ಕಾಯ್ತಿದ್ದೆ’ : ಸುಷ್ಮಾ ಸ್ವರಾಜ್ ಕೊನೆಯ ಟ್ವೀಟ್..!

ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ

LEAVE A REPLY

Please enter your comment!
Please enter your name here