Saturday, May 28, 2022
Powertv Logo
Homeದೇಶದೆಹಲಿ ಸರ್ಕಾರಕ್ಕೆ ಸುಪ್ರೀಂ ಛಾಟಿ !

ದೆಹಲಿ ಸರ್ಕಾರಕ್ಕೆ ಸುಪ್ರೀಂ ಛಾಟಿ !

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಆಸ್ಪತ್ರೆಗಳ ಸ್ಥಿತಿ ಅಯೋಮಯವಾಗಿದ್ದು ರೋಗಿಗಳನ್ನು ಪ್ರಾಣಿಗಳಿಗಿಂತಲೂ ತುಚ್ಛವಾಗಿ ಕಾಣಲಾಗುತ್ತಿದೆ  ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರದ ವಿರುದ್ಧ ಸರ್ವೋಚ್ಛ ನ್ಯಾಯಾಲಯ ಶುಕ್ರವಾರ ತೀವ್ರವಾಗಿ ಕಿಡಿಕಾರಿದೆ. 

ದೆಹಲಿಯಲ್ಲಿ ಕೊರೋನಾ ಪರಿಸ್ಥಿತಿ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ದೆಹಲಿ ಸರ್ಕಾರದ ವಿರುದ್ಧ ತೀವ್ರವಾಗಿ ಹರಿಹಾಯ್ದಿದೆ.  ಕೊರೋನಾ ಸೋಂಕಿತರನ್ನು ದೆಹಲಿಯಲ್ಲಿ ಪ್ರಾಣಿಗಳಿಗಿಂತಲೂ ತುಚ್ಛವಾಗಿ  ಕಾಣಲಾಗುತ್ತಿದೆ. ವ್ಯಕ್ತಿಯೊಬ್ಬರ ಮೃತದೇಹ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ. ವ್ಯಕ್ತಿ ಸಾವನ್ನಪ್ಪುತ್ತಿದ್ದರೂ ನೋಡಿಕೊಳ್ಳಲು ಯಾವೊಬ್ಬ ಸಿಬ್ಬಂದಿ ಕೂಡ ಆತನ ಬಳಿ ಬಂದಿಲ್ಲ. ಮೃತ ದೇಹಗಳ ಕುರಿತು ದೆಹಲಿ ಸರ್ಕಾರ ಕಾಳಜಿ ವಹಿಸುತ್ತಿಲ್ಲ. ವ್ಯಕ್ತಿ ಸಾವನ್ನಪ್ಪಿದ್ದರೂ ಕೂಡ ಆ ಕುರಿತು ಅವರ ಕುಟುಂಬಸ್ಥರಿಗೆ ಮಾಹಿತಿ ನೀಡುತ್ತಿಲ್ಲ. ಇನ್ನು ಕೆಲವು ಪ್ರಕರಣಗಳಲ್ಲಿ ಕುಟುಂಬಸ್ಥರಿಗೆ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವೇ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ. 

ಈ ಪರಿಸ್ಥಿತಿಯ ಕುರಿತು ತೀವ್ರ ಅಸಮಾಧಾನ ಹೊರ ಹಾಕಿರುವ ಸುಪ್ರೀಂ ಕೋರ್ಟ್​, ಪರಿಸ್ಥಿತಿಯ ಬಗ್ಗೆ  ಪ್ರತಿಕ್ರಿಯೆ ನೀಡುವಂತೆ ದೆಹಲಿ ಸರ್ಕಾರ, ಇತರೆ ರಾಜ್ಯಗಳು ಹಾಗೂ ದೆಹಲಿಯ ಎಲ್ಎನ್’ಜೆಪಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. 

ಪೇಷಂಟ್ ಮ್ಯಾನೆಂಜ್ಮೆಟ್ ಸಿಸ್ಟಮ್ ಕುರಿತು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ. 

ಮುಂಬೈ ಹಾಗೂ ಚೆನ್ನೈ ಅಂತಹ ನಗರಗಳಲ್ಲಿ ಪರೀಕ್ಷಾ ಸಂಖ್ಯೆಯನ್ನು 16,000ದಿಂದ 17,000ಕ್ಕೆ ಏರಿಕೆ ಮಾಡಲಾಗಿದೆ. ಆದರೆ, ದೆಹಲಿಯಲ್ಲೇಕೆ ಪರೀಕ್ಷಾ ಸಂಖ್ಯೆ ಹೆಚ್ಚಾಗುವುದಕ್ಕಿಂತಲೂ ಕಡಿಮೆಯಾಗುತ್ತಿದೆ ಎಂದು ಪ್ರಶ್ನಿಸಿದೆ. ದೆಹಲಿಯಲ್ಲಿ ಪ್ರತೀನಿತ್ಯ 7,000 ಇದ್ದ ಪರೀಕ್ಷೆಗಳ ಸಂಖ್ಯೆ ಏಕೆ 5,000ಕ್ಕೆ ಇಳಿಕೆ ಮಾಡಲಾಗಿದೆ ಎಂದು ಕೇಳಿದೆ. 

ಆಪ್ ಸರ್ಕಾರ ಕೊರೋನಾ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ನೀಡಿರುವ ಮಾರ್ಗದರ್ಶನಗಳನ್ನು ಅನುಸರಿಸುತ್ತಿಲ್ಲ. ದೆಹಲಿಯಲ್ಲಿನ ಪರಿಸ್ಥಿತಿ ಅತ್ಯಂತ ಭಯಾನಕ ಹಾಗೂ ಕರುಣಾಜನಕವಾಗಿದೆ. ಹಾಸಿಗೆಗಳು ಖಾಲಿ ಇದ್ದರೂ ಕೂಡ ಆಸ್ಪತ್ರೆಗೆ ದಾಖಲಾಗಲು ರೋಗಿಗಳು ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದೆ, 

LEAVE A REPLY

Please enter your comment!
Please enter your name here

- Advertisment -

Most Popular

Recent Comments