ನಾಳೆಯೇ ಅಯೋಧ್ಯೆ ತೀರ್ಪು – ದೇಶಾದ್ಯಂತ ಕಟ್ಟೆಚ್ಚರ

0
806

ನವದೆಹಲಿ : ಇಡೀ ದೇಶವೇ ಎದುರು ನೋಡುತ್ತಿದ್ದ ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆಯೇ ಸುಪ್ರೀಕೋರ್ಟ್​​ ಐತಿಹಾಸಿಕ ತೀರ್ಪನ್ನು ಪ್ರಕಟಿಸಲಿದೆ.
ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಈ ಮಹತ್ವದ ತೀರ್ಪಿನತ್ತ ಇಡೀ ದೇಶದ ಚಿತ್ತ ನೆಟ್ಟಿದ್ದು, ಚೀಫ್​ ಜಸ್ಟೀಸ್​ ರಂಜನ್ ಗೊಗೊಯ್​ ನೇತೃತ್ವದ ಪೀಠ ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು ನೀಡಲಿದೆ. ಇಂದು ಬೆಳಗ್ಗೆಯಷ್ಟೇ ಮುಖ್ಯ ನ್ಯಾಯಮೂರ್ತಿಗಳು ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ, ಐಜಿ, ಡಿಜಿಪಿ ಜೊತೆಯಲ್ಲಿ ಅಯೋಧ್ಯೆ ಸೇರಿದಂತೆ ಯುಪಿಯಲ್ಲಿ ಕಾನೂನು ಸುವ್ಯಸ್ಥೆ ಬಗ್ಗೆ ಚರ್ಚಿಸಿದ್ದರು.
ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಅಯೋಧ್ಯೆ ಸೇರಿದಂತೆ ದೇಶದಾದ್ಯಂತ ಕಟ್ಟೆಚ್ಚರವಹಿಸಲಾಗಿದೆ.

LEAVE A REPLY

Please enter your comment!
Please enter your name here