ಬೆಂಗಳೂರು: ಕೇಂದ್ರ ಸರ್ಕಾರ ಮೂರು ಕೃಷಿ ತಿದ್ದುಪಡೆ ಕಾಯ್ದೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ. ಪ್ರತಿಭಟನಾನಿರತ ರೈತರಿಗೆ ಭರ್ಜರಿ ಗೆಲುವು. ಕೃಷಿಯ ಮೂರು ಕಾಯ್ದೆಗಳನ್ನು ಸಿಜೆಐ ಬೊಬ್ಡೆ ನೇತೃತ್ವ ಪೀಠ ಮುಂದಿನ ಆದೇಶದವರೆಗೆ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ.
ಕೃಷಿ ಕಾಯ್ದೆ ವಿರೋಧಿಸಿ ರೈತರು ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬಿಕ್ಕಟ್ಟು ಇತ್ಯರ್ಥಕ್ಕೆ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿದೆ. ಅಶೋಕ ಗುಲಾಟಿ, ಅನಿಲ್ ಧನವಂತ್, ಭೂಪಿಂದರ್ ಸಿಂಗ್ ಮಾನ್, ಪ್ರಮೋದ್ ಜೋಶಿ ನಾಲ್ವರು ಕೃಷಿ ತಜ್ಞರ ಸಮಿತಿಯನ್ನು ರಚಿಸಿದೆ.