Sunday, May 29, 2022
Powertv Logo
Homeದೇಶನಿರ್ಭಯಾ ಅಪರಾಧಿಗಳಿಗೆ ಗಲ್ಲು ಸನ್ನಿಹಿತ?

ನಿರ್ಭಯಾ ಅಪರಾಧಿಗಳಿಗೆ ಗಲ್ಲು ಸನ್ನಿಹಿತ?

ನವದೆಹಲಿ : ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳ ಪೈಕಿ ಒಬ್ಬನಾದ ಮುಕೇಶ್ ಸಿಂಗ್​ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಸುಪ್ರಿಂ ಕೋರ್ಟ್​ ತಿರಸ್ಕರಿಸಿದೆ.

ಅಪರಾಧಿಗಳು ಕ್ಷಮಾದಾನ ಸಲ್ಲಿಸಲು ಎಲ್ಲಾ ಕಾನೂನಾತ್ಮಕ ಅವಕಾಶಗಳು ಈಗಾಗಲೇ ಮುಗಿದಿದೆ,  ಮತ್ತೆ ಯಾವುದೇ ರೀತಿಯಲ್ಲೂ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಸುಪ್ರಿಂಕೋರ್ಟ್ ಸ್ಪಷ್ಟಪಡಿಸಿದೆ. ಈ ಮೂಲಕ ಗಲ್ಲುಶಿಕ್ಷೆಯನ್ನು ತಪ್ಪಿಸಿಕೊಳ್ಳಲು ಅಪರಾಧಿಗಳಿಗೆ ಯಾವುದೇ ರೀತಿಯ  ಮಾರ್ಗ ಇಲ್ಲದಂತಾಗಿದೆ.

ಮಾರ್ಚ್​ 20 ರಂದು ಅಪರಾಧಿಗಳಿಗೆ ಗಲ್ಲುಶಿಕ್ಷೆ ನಿಗದಿಯಾಗಿದ್ದು , ತಿಹಾರ್​ ಜೈಲಿನಲ್ಲಿ ಗಲ್ಲಿಗೇರಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ.

ದಯಾಮರಣ ನೀಡಿ :

ಇನ್ನು ನಿರ್ಭಯಾ ಅಪರಾಧಿಗಳಿಗೆ ದಯಾಮರಣ ನೀಡಿ ಎಂದು ಕೋರಿ ಅಪರಾಧಿಗಳ ಕುಟುಂಬಸ್ಥರು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದು , ಜೈಲಿನಲ್ಲಿ ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ದಯಾಮರಣ ನೀಡಬೇಕು ಎಂದು  ಅರ್ಜಿ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments