Thursday, August 18, 2022
Powertv Logo
Homeದೇಶಅಯೋಧ್ಯೆ ವಿವಾದ ಪರಿಹಾರಕ್ಕೆ ಮಧ್ಯಸ್ಥಿಕೆ ಸೂತ್ರ..! ಸುಪ್ರೀಂ ನೇಮಿಸಿದ ಸಂಧಾನಕಾರರು ಯಾರು..?

ಅಯೋಧ್ಯೆ ವಿವಾದ ಪರಿಹಾರಕ್ಕೆ ಮಧ್ಯಸ್ಥಿಕೆ ಸೂತ್ರ..! ಸುಪ್ರೀಂ ನೇಮಿಸಿದ ಸಂಧಾನಕಾರರು ಯಾರು..?

ನವದೆಹಲಿ : ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ಸೂತ್ರ ಅನುರಿಸುವಂತೆ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್​ನ ಮಾಜಿ ನ್ಯಾಯಮೂರ್ತಿ ಎಫ್​​.ಎಮ್​ ಖಲೀಫುಲ್ಲಾ, ಆಧ್ಯಾತ್ಮ ಗುರು, ಆರ್ಟ್​ ಆಫ್​ ಲಿವಿಂಗ್​​ನ ಸ್ಥಾಪಕ ಶ್ರೀ ರವಿಶಂಕರ್​ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ್​ ಪಂಚು ಅವರನ್ನೊಳಗೊಂಡ ಸಮಿತಿಯನ್ನು ರಚಿಸಿದೆ.
ಫೈಜಾಬಾದ್​ನಲ್ಲಿ ಸಂಧಾನ ಸಭೆ ನಡೆಸಲು ಸುಪ್ರೀಂ ಆದೇಶ ನೀಡಿದ್ದು, ನ್ಯಾ.ಖಲೀಫುಲ್ಲಾ ಅವರ ನೇತೃತ್ವದಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆ ನೀಡಲಿದೆ. ಒಂದೇ ವಾರದಲ್ಲಿ ಮಧ್ಯಸ್ಥಿತಿಕೆ ಪ್ರಕ್ರಿಯೆ ಆರಂಭಿಸಲು ಸುಪ್ರೀಂ ಆದೇಶ ನೀಡಿದ್ದು, 4 ವಾರಗಳಲ್ಲಿ ಸಂಧಾನದ ಫಲಶೃತಿಯ ಮಾಹಿತಿ ನೀಡಬೇಕು. 8 ವಾರಗಳಲ್ಲಿ ಸಂಧಾನ ಪ್ರಕ್ರಿಯೆ ಅಂತಿಮವಾಗಬೇಕು. ಸಂಧಾನ ಪ್ರಕ್ರಿಯೆ ರಹಸ್ಯವಾಗಿರ ಬೇಕು. ಸೋರಿಕೆ ಆಗಬಾರದು ಎಂದು ಸುಪ್ರೀಂ ಹೇಳಿದೆ.

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments