ನಾಳೆಗೆ ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್

0
220

ನವದೆಹಲಿ : ರಾಜ್ಯ ರಾಜಕೀಯ ಕುತೂಹಲದ ಗೂಡಾಗಿದ್ದು, ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಸದ್ಯ ಅತೃಪ್ತರ ರಾಜೀನಾಮೆ ವಿವಾದ ಸುಪ್ರೀಂಕೋರ್ಟ್​ನಲ್ಲಿದ್ದು, ಇಂದು ಅತೃಪ್ತರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ನಾಳೆಗೆ ಐತಿಹಾಸಿಕ ಆದೇಶವನ್ನು ಕಾಯ್ದಿರಿಸಿದೆ.
ಅತೃಪ್ತರ ರಾಜೀನಾಮೆ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್​ನಲ್ಲಿ ಹೆಚ್ಚು-ಕಮ್ಮಿ 4 ಗಂಟೆಗಳಷ್ಟು ಕಾಲ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್​ ತ್ರಿಸದಸ್ಯ ನ್ಯಾಯಪೀಠ ಬುಧವಾರ ಬೆಳಗ್ಗೆ 10.30ಕ್ಕೆ ಆದೇಶ ಹೊರಡಿಸುವುದಾಗಿ ತಿಳಿಸಿದೆ.
15 ಅತೃಪ್ತ ಶಾಸಕರ ಪರವಾಗಿ ಮುಕುಲ್​ ರೋಹಟಗಿ, ಸ್ಪೀಕರ್ ಪರ ಅಭಿಷೇಕ್​ ಮನು ಸಿಂಘ್ವಿ, ಮುಖ್ಯಮಂತ್ರಿ ಪರ ರಾಜೀವ್​​​​​​​​​​ ಧವನ್​ವಾದ ಮಂಡಿಸಿದ್ರು.

LEAVE A REPLY

Please enter your comment!
Please enter your name here