ಜಯಪ್ರಕಾಶ್‌ ಹೆಗ್ಡೆ ಪರ ಹೆಚ್ಚಿದ ಬೆಂಬಲ: ಟ್ವಿಟರ್​​ನಲ್ಲೂ ಟ್ರೆಂಡ್​..!

0
430

ಉಡುಪಿ: ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು – ಉಡುಪಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ನಡುವೆ ಪೈಪೋಟಿ ಆರಂಭವಾಗಿದೆ. ಜಯಪ್ರಕಾಶ್‌ ಹೆಗ್ಡೆ ಪರ ಬಿಜೆಪಿ ಕಾರ್ಯಕರ್ತರು ಒಲವು ತೋರಿಸುತ್ತಿದ್ದು, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಟ್ವಿಟರ್​​ನಲ್ಲೂ ಜಯಪ್ರಕಾಶ್ ಹೆಗ್ಡೆ ಟ್ರೆಂಡಿಗ್ ಲಿಸ್ಟ್​ನಲ್ಲಿ 5ನೇ ಸ್ಥಾನದಲ್ಲಿದ್ದಾರೆ.

ಯಶ್ ಪಾಲ್ ಸುವರ್ಣ ಮತ್ತು ಮಾಜಿ ಶಾಸಕ ಜೀವರಾಜ್ ಕೂಡ ಟಿಕೆಟ್​ಗಾಗಿ ಲಾಬಿ ನಡೆಸುತ್ತಿದ್ದಾರೆ. ಜಯಪ್ರಕಾಶ್ ಹೆಗ್ಡೆ ಪರ ದಿನದಿಂದ ದಿನಕ್ಕೆ ಜನರ ಒಲವು ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಕಾರ್ಯಕರ್ತರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಟ್ವೀಟರ್‌ನಲ್ಲಿ #JPH4udupichikamagalur2019 ಟ್ವೀಟ್‌ಗಳ ಟ್ರೆಂಡ್ ಆರಂಭಿಸಿದ್ದಾರೆ. ನಾಳೆ ಬಿಜೆಪಿ ಕೋರ್ ಕಮಿಟಿ ಮೀಟಿಂಗ್ ನಡೆಯಲಿದ್ದು ಈ ಹಿನ್ನೆಲೆ ಜಯಪ್ರಕಾಶ್ ಬೆಂಬಲಿಗರು ಟ್ರೆಂಡ್​ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here