Tuesday, September 27, 2022
Powertv Logo
Homeಸಿನಿಮಾಮೋದಿ ಜೊತೆ ಕಾಡು ಸುತ್ತಿದ್ದ ಗ್ರಿಲ್ಸ್ ರಜನಿಕಾಂತ್​ ಜೊತೆ ಬಂಡೀಪುರದಲ್ಲಿ..!

ಮೋದಿ ಜೊತೆ ಕಾಡು ಸುತ್ತಿದ್ದ ಗ್ರಿಲ್ಸ್ ರಜನಿಕಾಂತ್​ ಜೊತೆ ಬಂಡೀಪುರದಲ್ಲಿ..!

ಚಾಮರಾಜನಗರ: ಸೂಪರ್ ಸ್ಟಾರ್ ರಜನಿಕಾಂತ್ ರಾಷ್ಟ್ರೀಯ ಉದ್ಯಾನವನ ಬಂಡೀಪುರಕ್ಕೆ ಬಂದಿದ್ದು, ಪಧಾನಿ ಮೋದಿ ಜೊತೆ ಕಾಡು ಸುತ್ತಿದ್ದ ಬೇರ್​ ಗ್ರಿಲ್ಸ್​​ ತಲೈವಾ ಜೊತೆ ಕಾಡು -ಮೇಡು ಅಲೆಯಲಿದ್ದಾರೆ.  3 ದಿನಗಳ ಕಾಲ ಮ್ಯಾನ್ ವರ್ಸಸ್ ವೈಲ್ಡ್ ಸಾಕ್ಷ್ಯಚಿತ್ರದ ಚಿತ್ರೀಕರಣವನ್ನು ಬಂಡೀಪುರದಲ್ಲಿ  ನಡೆಯಲಿದ್ದು, ಅದಕ್ಕಾಗಿ ಬಂಡೀಪುರ ವ್ಯಾಪ್ತಿಯ ಸೆರಾಯ್ ರೆಸಾರ್ಟ್ ನಲ್ಲಿ ರಜನಿಕಾಂತ್ ವಾಸ್ತವ್ಯ ಹೂಡಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಿದ್ದು, ಇದರಲ್ಲಿ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್  ಕೂಡಾ ಭಾಗವಹಿಸುವ ಸಾಧ್ಯತೆಯಿದೆ. ಮೋದಿ ಜೊತೆ ಕಾಡು ಸುತ್ತಾಡಿದ ಬೇರ್ ಗ್ರಿಲ್ಸ್  ರಜನಿಕಾಂತ್​​ಗೆ ಸಾಥ್ ನೀಡಲಿದ್ದಾರೆ. ಅರಣ್ಯ ಇಲಾಖೆ ಹಲವು ನಿರ್ಬಂಧಗಳನ್ನು ಹೇರಿ ಶೂಟಿಂಗ್ ಮಾಡುವುದಕ್ಕೆ ಅನುಮತಿಯನ್ನು ನೀಡಿದೆ.

 

LEAVE A REPLY

Please enter your comment!
Please enter your name here

- Advertisment -

Most Popular

Recent Comments