ಕುರುಕ್ಷೇತ್ರ’ ಸಿನಿಮಾವೇ ಅಲ್ಲ ಅಂದಿದ್ದೇಕೆ ಸುಮಲತಾ?

0
1244

ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಕುರುಕ್ಷೇತ್ರ’ ರಿಲೀಸ್ ಆಗಿದೆ. ಮಳೆಯ ಅಬ್ಬರದ ನಡುವೆಯೂ ‘ಕುರುಕ್ಷೇತ್ರ’ ‘ದರ್ಶನ’ಕ್ಕೆ ಸಿನಿ ರಸಿಕರು ಥಿಯೇಟರ್​ಗಳಿಗೆ ಹೋಗ್ತಿದ್ದಾರೆ. ದರ್ಶನ್​ ನಟನೆಗೆ ಫ್ಯಾನ್ಸ್ ಫುಲ್​ ಫಿದಾ ಆಗಿದ್ದಾರೆ. ಚಿತ್ರ ರಿಲೀಸ್​​ಗೆ ತಡವಾದ್ರೂ ಡಿ.ಬಾಸ್​ ಫ್ಯಾನ್ಸ್​ಗೆ ಭರ್ಜರಿ ಹಬ್ಬದೂಟ ಸಿಕ್ಕಿದೆ. ಚಿತ್ರದ ಬಗ್ಗೆ ಎಲ್ಲಾ ಕಡೆ ಪಾಸಿಟೀವ್ ರಿವ್ಯೂ ಇದೆ.
ಸಂಸದೆ ಸುಮಲತಾ ಅಂಬರೀಶ್​ರವರು ‘ಕುರುಕ್ಷೇತ್ರ’ ಸಿನಿಮಾ ನೋಡಿದ್ದಾರೆ. ದುರ್ಯೋಧನನ ಅವತಾರದಲ್ಲಿ ಮನೆ ಮಗನನ್ನು ಕಂಡ ಸುಮಲತಾ ‘ಕುರುಕ್ಷೇತ್ರ’ ಸಿನಿಮಾವೇ ಅಲ್ಲ ಅಂದಿದ್ದಾರೆ..! ಅರೆ, ಸುಮಲತಾ ಹೀಗಂದ್ರಾ? ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರಾ..? ವ್ಹೇಟ್​ ಗಡಿಬಿಡಿ ಮಾಡ್ಕೋ ಬೇಡಿ ಸುಮಲತಾ ಹೀಗಂದಿದ್ದು ಪಾಸಿಟೀವ್ ವೇನಲ್ಲಿ..!
ಹೌದು, ಕುರುಕ್ಷೇತ್ರ ನೋಡಿದ ಸುಮಲತಾ, ಕುರುಕ್ಷೇತ್ರವನ್ನು ಸಿನಿಮಾ ಅಂದ್ರೆ ತಪ್ಪಾಗುತ್ತೆ.. ಇದೊಂದು ಸುಂದರ ಜರ್ನಿ, ಒಂದೊಳ್ಳೆ ಅನುಭವ ಎಂದಿದ್ದಾರೆ. ಜೊತೆಗೆ ದರ್ಶನ್​ ಅವರ ನಟನೆ ಬಗ್ಗೆ ಹೇಳಿದ ಅವರು, ದುರ್ಯೋಧನನೇ ದರ್ಶನ್, ದರ್ಶನ್ನೇ ದುರ್ಯೋಧನ.. ಆ ಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಅಂತ ದಚ್ಚು ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಅಲ್ಲದೆ, ರೆಬೆಲ್​ ಸ್ಟಾರ್ ಅಂಬರೀಶ್​ ಅವರ ಕೊನೆಯ ಸಿನಿಮಾ ಇದಾಗಿದ್ದು, ಭೀಷ್ಮನ ಅವತಾರದಲ್ಲಿ ಅಂಬಿ ಮಿಂಚಿದ್ದಾರೆ. ಸಿನಿಮಾ ನೋಡಿದ ಸುಮತಾ ಅಂಬಿಯನ್ನು ನೆನದು ಭಾವುಕರಾಗಿದ್ದಾರೆ.
ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್​ ಅವರು ಸಾಕ್ಷತ್ ಕೃಷ್ಣನೇ ಧರೆಗಿಳಿದು ಬಂದಂತೆ ಕೃಷ್ಣನ ಗೆಟಪ್​ನಲ್ಲಿ ಸದ್ದು ಮಾಡಿದ್ದಾರೆ. ಇನ್ನುಳಿದಂತೆ ಕರ್ಣನಾಗಿ ಅರ್ಜುನ್ ಸರ್ಜಾ, ಕುಂತಿಯಾಗಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಭಾನುಮತಿಯಾಗಿ ಮೇಘನರಾಜ್​, ಧರ್ಮರಾಯನಾಗಿ ಶಶಿಕುಮಾರ್, ಅರ್ಜುನನಾಗಿ ಸೋನು ಸೂದ್, ಭೀಮನಾಗಿ ಡ್ಯಾನಿಶ್ ಅಕ್ತರ್, ನಕುಲನಾಗಿ ಯಶಸ್​​ ಸೂರ್ಯ, ಸಹದೇವನಾಗಿ ಚಂದನ್​, ಶಕುನಿಯಾಗಿ ರವಿಶಂಕರ್, ದ್ರೋಣಾಚಾರ್ಯರಾಗಿ ಶ್ರೀನಿವಾಸ್​ ಮೂರ್ತಿ, ದ್ರೌಪದಿಯಾಗಿ ಸ್ನೇಹ , ದೃತರಾಷ್ಟ್ರರಾಗಿ ಶ್ರೀನಾಥ್, ದುಶ್ಯಾಸನನಾಗಿ ರವಿಚೇತನ್​​​, ಗಂಗಾಧರರಾಜನಾಗಿ ಅವಿನಾಶ್ ಹೀಗೆ ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ಸಾಕ್ಷಾತ್ ಅವಾತಾರವನ್ನೇ ಎತ್ತಿದ್ದಾರೆ..

LEAVE A REPLY

Please enter your comment!
Please enter your name here