ಮಂಡ್ಯ ಜನ ಎಲ್ಲವನ್ನೂ ಭಾವನಾತ್ಮಕವಾಗಿ ನೋಡ್ತಾರೆ : ಸುಮಲತಾ ಅಂಬರೀಶ್​

0
198

ಬೆಂಗಳೂರು : ಮಂಡ್ಯ ಜನ ಎಲ್ಲಾ ವಿಷಯವನ್ನು ಭಾವನಾತ್ಮಕವಾಗಿ ನೋಡ್ತಾರೆ ಅಂತ ಮಂಡ್ಯ ರಣಕಣದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ರು.
ಪ್ರೆಸ್​​ಕ್ಲಬ್​ನಲ್ಲಿ ಇಂದು ಮಾಧ್ಯಮ ಸಂವಾದ ನಡೆಸಿದ ಅವರು, ತಾನೇಕೆ ರಾಜಕೀಯಕ್ಕೆ ಎಂಟ್ರಿಕೊಟ್ಟೆ ಎನ್ನುವ ವಿಚಾರ ಸೇರಿದಂತೆ ಹತ್ತಾರು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು.
‘ನಾನು ಮಂಡ್ಯಕ್ಕೆ ಹೋದಾಗ ನನ್ನಿಂದ ಏನು ಬಯಸುತ್ತಿರಾ ಎಂದು ಎಲ್ಲರನ್ನು ಕೇಳ್ದೆ. ಅವರು ಭಾವನಾತ್ಮಕ ಮಾತುಗಳಿಂದ ನನ್ನನ್ನು ಯಾಕೆ ಅವರು ಎಂಪಿ ಮಾಡಬೇಕೆಂದು ಬಯಸುತ್ತಿದ್ದಾರೆ ಎಂದು ಅರಿವಾಯ್ತು. ಈವಾಗ ನೀವು ನಮ್ಮ ಕೈ ಬಿಟ್ಟರೆ ಮತ್ತೆ ಮಂಡ್ಯಕ್ಕೆ ಬರಬಾರದು ಎಂಬ ಭಾವನೆ ವ್ಯಕ್ತಪಡಿಸಿದ್ರು. ಮಂಡ್ಯ ಯಾವಾಗಲು ಯೂನಿಕ್, ಅವರಿಗೆ ಅವರದೇ ಆದ ಟ್ರೆಂಡ್ ಇದೆ. ಎಲ್ಲವನ್ನು ಭಾವನಾತ್ಮಕವಾಗಿ ನೋಡ್ತಾರೆ, ಅಂಬರೀಶ್ ಅವರನ್ನು ಅದೇ ಪ್ರೀತಿ ಇಂದ ನೋಡ್ತಾರೆ. ಜನರ ಮಾತುಗಳನ್ನು ಕೇಳಿ ಧೈರ್ಯ ಬಂತು’ ಎಂದರು.
‘ಅಂಬರೀಶ್ ಅವರು ವಸತಿ ಸಚಿವರಾಗಿದ್ದಾಗ, ನನಗೆ ಈ ಸಚಿವ ಸ್ಥಾನ ಸಿಕ್ಕಿದ್ದು ನನ್ನ ಪುಣ್ಯ ಅಂತ ಹೇಳಿದ್ರು. ಬಡವರಿಗೆ ಮನೆ ಕಟ್ಟಿಕೊಡುವ ಭಾಗ್ಯ ಸಿಕ್ತು ಅಂತ ಖುಷಿ ಪಟ್ಟಿದ್ರು. ಐದು ವರ್ಷದಲ್ಲಿ ನಾನು ಮಂಡ್ಯವನ್ನ ಸಿಂಗಾಪುರ್ ಪ್ಯಾರೀಸ್ ಮಾಡುತ್ತೇನೆ ಎಂದು ನಾನು ಹೇಳಲ್ಲ. ಆದರೆ ಮಂಡ್ಯವನ್ನ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ. ನನ್ನ ನಂಬಿಕೊಂಡು ಒಂದಷ್ಟು ಜನ ಇದ್ದಾರೆ. ಅವರಿಗೋಸ್ಕರ ಮಂಡ್ಯ ಅಭಿವೃದ್ಧಿ ಗೆ ಏನೆನೆಲ್ಲಾ ಮಾಡಬೇಕೋ ಅದನೆಲ್ಲಾ ಮಾಡುತ್ತೇನೆ. ಮಂಡ್ಯ ಪ್ರತಿನಿಧಿಯಾಗಿ ದೆಹಲಿಯಲ್ಲಿ ನಾನು ಧ್ವನಿ ಎತ್ತುತ್ತೇನೆ’ ಎಂದು ತನ್ನ ಕನಸುಗಳನ್ನು ಬಿಚ್ಚಿಟ್ಟರು.

LEAVE A REPLY

Please enter your comment!
Please enter your name here