ನಾಗಮಂಗಲ, ಬೆಳ್ಳೂರಿನಲ್ಲಿ ಸುಮಲತಾ ಪ್ರಚಾರ

0
137

ಮಂಡ್ಯ: ಲೋಕ ಸಮರಕ್ಕೆ ಮುಹೂರ್ತ ಫಿಕ್ಸ್‌ ಆಗ್ತಿದ್ದಂತೆ ಸುಮಲತಾ ಮತ್ತಷ್ಟು ಆ್ಯಕ್ಟಿವ್ ಆಗಿದ್ದಾರೆ. ನಿರಂತರ ಪ್ರಚಾರದಲ್ಲಿ ಬ್ಯುಸಿ ಆಗಿರೋ ಗೌಡ್ತಿ ಇಂದು ಮತ್ತೆ ಸಕ್ಕರೆನಾಡಿನಲ್ಲಿ ಅಬ್ಬರಿಸಲಿದ್ದಾರೆ. ನಾಗಮಂಗಲ ಹಾಗೂ ಬೆಳ್ಳೂರಿನಲ್ಲಿ ಸುಮಲತಾ ಪ್ರವಾಸ ಕೈಗೊಳ್ಳಲಿದ್ದಾರೆ. ಲೋಕ ಸಮರಕ್ಕೆ ಸುಮಲತಾ ಭರ್ಜರಿ ತಯಾರಿ ನಡೆಸಿದ್ದು, ನಾಗಮಂಗಲ, ಬೆಳ್ಳೂರಿನಲ್ಲಿ  ಪ್ರಚಾರ ನಡೆಸಲಿದ್ದಾರೆ.

ಈಗಾಗಲೇ ಸುಮಲತಾ ಸ್ಪರ್ಧೆಗೆ ಮಂಡ್ಯದ ಮಂದಿ ಬೆಂಬಲ ತೋರಿಸಿದ್ದು, ನಿಖಿಲ್ ಸ್ಪರ್ಧೆ ಮಾಡೋದನ್ನು ವಿರೋಧಿಸಿ ಕುಟುಂಬ ರಾಜಕಾರಣ ನಿಲ್ಲಿಸಿ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಸುಮಲತಾಗೆ ಟಿಕೆಟ್​ ನೀಡೋದಿಲ್ಲ ಅನ್ನೋದನ್ನೂ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here