ಹೇಳಿಕೆಗಳಿಗೆ ಡೋಂಟ್​ ಕೇರ್ ಅಂದ್ರು ಸುಮಲತಾ..!

0
226

ಮಂಡ್ಯ: ನಾನು ಯಾರ ಹೇಳಿಕೆಗೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮಾತನಾಡುವಾಗ ಎಚ್ಚರಿಕೆಯಿಂದ ಮಾತಾಡ್ಬೇಕು ಅಂತ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲಿ ಹೇಳಿದ್ದಾರೆ.

ಸಚಿವ ರೇವಣ್ಣ ಅವರ ಹೇಳಿಕೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಸುಮಲತಾ ಅಂಬರೀಶ್​ ನಿರಾಕರಿಸಿದ ಸುಮಲತಾ ಅವರು, “ಮಹಿಳೆಯರನ್ನು ಪೂಜಿಸಿದ್ರೆ ಒಳಿತಾಗುತ್ತೆ ಅನ್ನೋ ದೇಶ ನಮ್ದು. ಸಚಿವರ ಹೇಳಿಕೆ ಬಗ್ಗೆ ಜನರೇ ತೀರ್ಮಾನ ಕೈಗೊಳ್ತಾರೆ” ಅಂತ ಮಾರ್ಮಿಕವಾಗಿ ಹೇಳಿದ್ದಾರೆ.

“ಮಹಿಳೆಯರ ಬಗ್ಗೆ ಈ ರೀತಿಯ ಮಾತುಗಳು ಬರಬಾರದು. ನಾವು ಏನೇ ಮಾತನಾಡಿದರೂ ಜನಕ್ಕೆ ಸಂದೇಶ ಹೋಗುತ್ತೆ. ನಾವು ಎಚ್ಚರಿಕೆಯಿಂದ ಮಾತನಾಡಬೇಕು. ಅಂಬರೀಶ್ ಯಾರು ಏನೇ ಹೇಳಿದ್ರು ಡೋಂಟ್ ಕೇರ್​ ಅಂತಿದ್ರು. ನಾನು ಅಂಬಿ ಮಾರ್ಗದರ್ಶನದಂತೆ ಹೋಗುತ್ತೇನೆ” ಅಂತ ಅವರು ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here