ಸಕ್ಕರೆನಾಡಿನಲ್ಲಿ ಸುಮಲತಾ ಟೆಂಪಲ್‌ ರನ್‌..!

0
70

ಮಂಡ್ಯ: ವಿಶ್ವವಿಖ್ಯಾತ ವೈರಮುಡಿಗೆ ಸುಮಲತಾ ಅಂಬರೀಶ್‌ ಪೂಜೆ ಸಲ್ಲಿಸಿದ್ದಾರೆ. ಸುಮಲತಾ ಅವರು ಇಂದು ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಮಂಡ್ಯದ ಹಳೇ ನಗರದಲ್ಲಿರುವ ಪುರಾಣ ಪ್ರಸಿದ್ಧ ಲಕ್ಷ್ಮೀ ಜನಾರ್ಧನ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ. ಇಂದು ವಿಶ್ವ ವಿಖ್ಯಾತ ವೈರಮುಡಿ ಉತ್ಸವ ನಡೆಯುತ್ತಿದ್ದು ಸಂಜೆ ವೇಳೆಗೆ ವೈರಮುಡಿ ಮೇಲುಕೋಟೆ ತಲಪಲಿದೆ. ಮಂಡ್ಯ ಜಿಲ್ಲಾ ಖಜಾನೆಯಲ್ಲಿದ್ದ ವಜ್ರ ಖಚಿತ ವೈರಮುಡಿ ಕಿರೀಟಕ್ಕೆ ಲಕ್ಷ್ಮೀ ಜನಾರ್ಧನ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ. ಸುಮಲತಾ ಅಂಬರೀಶ್ ಅವರು ಈಗಾಗಲೇ ಮಂಡ್ಯ, ಮೈಸೂರು ನಗರಗಳಲ್ಲಿ ಪ್ರವಾಸ ಕೈಗೊಂಡು ಜನರನ್ನು ಭೇಟಿಯಾಗಿದ್ದಾರೆ. ಪುತ್ರ ಅಭಿಷೇಕ್​ ಅವರೂ ಸುಮಲತಾಗೆ ಸಾಥ್​ ನೀಡಿದ್ದರು. ಇಂದು ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ ಅವರು “ಮಂಡ್ಯದಿಂದ ಸ್ಪರ್ಧಿಸೋ ಬಗ್ಗೆ ನಾಳೆ ನನ್ನ ನಿರ್ಧಾರ ತಿಳಿಸಲಿದ್ದೇನೆ. ನಾಳೆ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದೇನೆ” ಅಂತ ಹೇಳಿದ್ದಾರೆ. ಪ್ರತಿಸ್ಪರ್ಧಿ ನಿಖಿಲ್ ಬಗ್ಗೆ ಪ್ರತಿಕ್ರಿಯಿಸಿ,”ನಿಖಿಲ್ ಕುಮಾರಸ್ವಾಮಿ ನನಗೆ ವಿರೋಧಿ ಅಲ್ಲ. ನಿಖಿಲ್​​​​​​​ ಹಾಗೂ ಅಭಿಷೇಕ್​ ಆತ್ಮೀಯ ಸ್ನೇಹಿತರು” ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here