ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸೋದು ಬಹುತೇಕ ಖಚಿತ

0
327

ಮಂಡ್ಯ: ಲೋಕ ಸಮರಕ್ಕೆ ಬಹುತೇಕ ಕಾಂಗ್ರೆಸ್​​ನಿಂದ ಟಿಕೆಟ್​​ ಕೈ ತಪ್ಪಿದ ಬೆನ್ನಲ್ಲೇ ಸುಮಲತಾ ಅಂಬರೀಶ್​​​ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ರಣಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ತಮ್ಮ ಸರ್ಧೆ ಬಗ್ಗೆ ಇಂದು ಅಥವಾ ನಾಳೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಕಾಂಗ್ರೆಸ್​ ಇದೇ ತಿಂಗಳ 16ರಂದು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಿದ್ದು, ಸುಮಲತಾ ಅಂಬರೀಶ್​​ ಅದರೊಳಗೆ ತಮ್ಮ ರಾಜಕೀಯ ನಿರ್ಧಾರ ಹೇಳ್ತಾರೆ ಎಂಬ ಮಾತುಗಳೂ ಕೇಳಿ ಬರ್ತಿವೆ.

ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಸ್ಪರ್ಧೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರ ರಂಗೇರಿದೆ. ಸುಮಲತಾ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸುಮಲತಾ ಬೆಂಬಲಿಗರು ಗೋ ಬ್ಯಾಕ್ ನಿಖಿಲ್ ಅಂತ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನವನ್ನೂ ಮಾಡಿದ್ರು. ಮಂಡ್ಯದ ಹಲವು ಕಾಂಗ್ರೆಸ್ ನಾಯಕರೂ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here