ಮಂಡ್ಯದಲ್ಲೇ ಮನೆ ಮಾಡ್ತಿದ್ದಾರಂತೆ ಸುಮಲತಾ..!

0
225

ಮಂಡ್ಯ : ಸುಮಲತಾ ಅಂಬರೀಶ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸೋದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧೆ ಮಾಡೋದು ಪಕ್ಕಾ ಆಗಿದೆ.
ಸುಮಲತಾ ಅವರು ಮಂಡ್ಯದಲ್ಲೇ ಮನೆ ಮಾಡಿ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದ್ದು, ಇದು ಅವರ ಸ್ಪರ್ಧೆಯನ್ನು ಖಚಿತ ಮಾಡಿದೆ. ಸುಮಲತಾ ಅವರು ಮಂಡ್ಯದಲ್ಲಿ ಮನೆ ಹುಡುಕುವಂತೆ ತಮ್ಮ ಆಪ್ತರಿಗೆ ಹೇಳಿದ್ದಾರಂತೆ. ‘ಬಾಡಿಗೆ ಮನೆಯಾದ್ರೆ ಮಾಜಿ ಸಂಸದೆ ರಮ್ಯಾ ಅವರಂತೆ ಅಪಪ್ರಚಾರ ಎದುರಿಸಬೇಕಾಗುತ್ತೆ. ಚುನಾವಣೆ ಗೆದ್ದ ಮೇಲೆ ಇತ್ತ ಸುಳಿಯಲ್ಲ ಅನ್ನೋ ಮಾತುಗಳು ಕೇಳಿಬರುತ್ತಿವೆ, ಆದ್ದರಿಂದ ಸ್ವಂತ ಮನೆ ಮಾಡಿ’ ಅಂತ ಆಪ್ತರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಸಮಲತಾ ಅವರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ,‘ಸುಮಲತಾ ಅಂಬರೀಶ್​​​ ನನ್ನನ್ನು ಭೇಟಿ ಮಾಡಿದ್ರು. ಸೀಟು ಹಂಚಿಕೆ ಚರ್ಚೆ ಬಳಿಕ ತಿಳಿಸುವುದಾಗಿ ಹೇಳಿದ್ದೇನೆ’ ಎಂದರು.

LEAVE A REPLY

Please enter your comment!
Please enter your name here