ಪೊಲಿಟಿಕಲ್​ ಎಂಟ್ರಿ ಬಗ್ಗೆ ಸುಮಲತಾ ಗ್ರೀನ್​ ಸಿಗ್ನಲ್

0
267

ನಾಗಮಂಗಲ: ಸುಮಲತಾ ಅಂಬರೀಷ್ ರಾಜಕೀಯ ಪ್ರವೇಶ ವಿಚಾರ ಸಂಬಂಧ ಆದಿಚುಂಚನಗಿರಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಅಭಿಮಾನಿಗಳು ತುಂಬಾ ಆಸೆ ಇಟ್ಟು ಒತ್ತಡ ಹಾಕುತ್ತಿದ್ದಾರೆ. ಅಭಿಮಾನಿಗಳ ಆಸೆ ಸೋಲಬಾರದು ಅನ್ನೋದು ನನ್ನ ಆಸೆ ಅಂತ ಪರೋಕ್ಷವಾಗಿ ರಾಜಕೀಯ ಪ್ರವೇಶಕ್ಕೆ ಸುಮಲತಾ ಗ್ರಿನ್​ ಸಿಗ್ನಲ್​ ಕೊಟ್ಟಿದ್ದಾರೆ. “ಸ್ಪರ್ಧೆ ಮಾಡಿದ್ರೆ ಮಂಡ್ಯದಿಂದ ಮಾತ್ರ. ಬೇರೆ ಇನ್ಯಾವ ಕ್ಷೇತ್ರಕ್ಕೂ ಹೋಗಲ್ಲ. ರಾಜಕೀಯ ಪ್ರವೇಶದ ಬಗ್ಗೆ ಇನ್ನೂ ಗೊಂದಲ ಇದೆ ” ಅಂತಲೂ ಹೇಳಿದ್ದಾರೆ.

ಇಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಗೆ ಸುಮಲತಾ ಅಂಬರೀಶ್ ಅವರು ಪುತ್ರ ಅಭಿಷೇಕ್​ಗೌಡ ಜೊತೆ ಭೇಟಿ ನೀಡಿದ್ದಾರೆ. ಕುಲದೈವ ಶ್ರೀ ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

LEAVE A REPLY

Please enter your comment!
Please enter your name here