ಎಸ್​.ಎಂ ಕೃಷ್ಣ ಭೇಟಿ ಬಳಿಕ ಸುಮಲತಾ ಅಂಬರೀಶ್ ಹೇಳಿದ್ದೇನು?

0
197

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಣಕ್ಕಿಳಿಯಲು ರೆಡಿಯಾಗಿರುವ ಸುಮಲತಾ ಅಂಬರೀಶ್ ಅವರು ಇಂದು ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸದಾಶಿವ ನಗರದಲ್ಲಿನ ಕೃಷ್ಣ ಅವರ ಮನೆಗೆ ಸುಮಲತಾ ಭೇಟಿ ನೀಡಿದ್ರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಸ್​​.ಎಂ ಕೃಷ್ಣ ಅವರು ನಮ್ಮ ಹಿರಿಯ ನಾಯಕರು. ಅವರ ಜೊತೆ ಮಂಡ್ಯ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿದ್ದೇವೆ. ಕೃಷ್ಣ ಮಂಡ್ಯದ ಹೆಮ್ಮೆಯ ಪುತ್ರರಾಗಿ ಸಿಎಂ ಆಗಿದ್ರು .ಎಸ್​.ಎಂ ಕೃಷ್ಣ ಅವರ ಮೇಲೆ ನಮಗೆ ಅಪಾರ ಗೌರವವಿದೆ. ನನ್ನ ಅನಿಸಿಕೆಗಳನ್ನು ಅವರ ಬಳಿ ಹಂಚಿಕೊಂಡಿದ್ದೇನೆ. ಮಾ. 18ರಂದು ನನ್ನ ನಿರ್ಧಾರ ತಿಳಿಸುತ್ತೇನೆ’ ಎಂದು ಹೇಳಿದ್ರು.
ಅಂಬಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದ ಬಗ್ಗೆ ಸಿಎಂ ನೀಡಿರೋ ಹೇಳಿಕೆಗೆ, ‘ಅದರ ಬಗ್ಗೆ ನಾನು ರಾಜಕಾರಣ ಮಾಡಲ್ಲ. ನಾನು ಕ್ಲೀನ್ ಎಲೆಕ್ಷನ್ ಕ್ಯಾಂಪೇನ್ ಮಾಡಬೇಕಷ್ಟೇ. ಕೆಲಸ ಮುಂದಿಟ್ಟುಕೊಂಡು ಮುನ್ನಡೆಯಬೇಕಿದೆ. ಎಲೆಕ್ಷನ್ ಕಾರಣಕ್ಕೆ ಈ ರೀತಿ ಮಾತು ಬರುತ್ತಿರಬಹುದು. ಸಿಂಪತಿಯ ಲಾಭ ಪಡೆಯುವ ಉದ್ದೇಶ ಇರಬಹುದು’ ಎಂದು ಸುಮಲತಾ ತಿರುಗೇಟು ನೀಡಿದ್ರು.

LEAVE A REPLY

Please enter your comment!
Please enter your name here