ಯೋಧ ಗುರು ಅವರ ಪತ್ನಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟ ಸುಮಲತಾ..!

0
324

ಮಂಡ್ಯ: ಹುತಾತ್ಮ ಯೋಧ ಗುರು ಅವರ ಮನೆಗೆ ಸುಮಲತಾ ಅಂಬರೀಶ್​ ಹಾಗೂ ಅಭಿಷೇಕ್ ಅಂಬರೀಶ್​ ಭೇಟಿ ನೀಡಿದ್ದಾರೆ. ಈ ಸಂದರ್ಭ ಗುರು ಅವರ ಪತ್ನಿಯನ್ನು ತಬ್ಬಿಕೊಂಡು ಸುಮಲತಾ ಅವರು ಕಣ್ಣೀರಿಟ್ಟಿದ್ದಾರೆ. ಹುತಾತ್ಮ ಗುರು ಕುಟುಂಬಕ್ಕೆ ಸಾಂತ್ವನ ಹೇಳಿದ ಸುಮಲತಾ ಅವರು ಕುಟುಂಬದ ರೋದನವನ್ನು ನೋಡಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಸುಮಲತಾ ಅವರು ತಾವು ಹುತಾತ್ಮ ಯೋಧ ಗುರು ಕುಟುಂಬಕ್ಕೆ ನೀಡಲು ಉದ್ದೇಶಿಸಿರುವ ಜಮೀನು ವೀಕ್ಷಣೆ ಮಾಡಿದ್ದಾರೆ. ಹಾಗೇ ಈ ಸಂಬಂಧ ತಮ್ಮ ಸಂಬಂಧಿಕರಿಂದ ಜಮೀನಿನ ಬಗ್ಗೆ ಮಾಹಿತಿ ಮಾಹಿತಿ ಪಡೆದಿದ್ದಾರೆ.

ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಅವರ ಅಂತ್ಯಸಂಸ್ಕಾರದ ಸಂದರ್ಭ ಸಮಲತಾ ಅಂಬರೀಶ್ ಹಾಗೂ ಅಭಿಷೇಕ್​ ಅಂಬರೀಶ್ ಅವರು ಶೂಟಿಂಗ್​ ನಿಮಿತ್ತ ಮಲೇಷ್ಯಾದಲ್ಲಿದ್ದರು. ಅಲ್ಲಿಂದಲೇ ವಿಡಿಯೋ ಮೂಲಕ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದ ಸುಮಲತಾ ಅವರು ಯೋಧನ ಕುಟುಂಬಕ್ಕೆ ಅರ್ಧ ಎಕರೆ ಜಾಗ ನೀಡುವುದಾಗಿ ಭರವಸೆ ನೀಡಿದ್ದರು. ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್​ ಅಂಬರೀಶ್​ ಪರವಾಗಿ ಅಂಬರೀಶ್​ ಅವರ ಅಣ್ಣನ ಮಗ ಹುತಾತ್ಮ ಗುರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here