ಫೇಸ್​ಬುಕ್​ನಲ್ಲಿ ಸುಮಲತಾ ಆಕ್ರೋಶ

0
254

ಮಂಡ್ಯ: ಚುನಾವಣೆಯಿಂದ ಹಿಂದೆ ಸರಿಯುತ್ತಾರೆಂಬ ವದಂತಿ ಹರಡುತ್ತಿರುವುದರ ಬಗ್ಗೆ ಸುಮಲತಾ ಅಂಬರೀಶ್ ಅವರು ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರ ಮಾಡುತ್ತಿದ್ದಾರೆ. ಮಂಡ್ಯ ಜನರ ಋಣ ತೀರಿಸಲು ನಾನು ಬದ್ಧ. ಇನ್ನು ಮುಂದೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ನಿಮ್ಮ ಬೆಂಬಲ ಆಶೀರ್ವಾದ ಸದಾ ನನ್ನ ಮೇಲಿರಲಿ. ನಿಮ್ಮ ಪ್ರೀತಿ, ಕಾಳಜಿ, ಒತ್ತಾಸೆ, ಬೆಂಬಲವೇ ನಮಗೆ ಶ್ರೀರಕ್ಷೆ. ಇಂತಿ ನಿಮ್ಮ ಸುಮಲತಾ ಅಂಬರೀಶ್” ಅಂತ ಸುಮಲತಾ ಅವರು ಪೋಸ್ಟ್​ ಮಾಡಿದ್ದಾರೆ.

ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದು ಚುನಾವಣಾ ಕಣ ರಂಗೇರಿದೆ. ಮಂಡ್ಯ ಕಾಂಗ್ರೆಸ್ ನಾಯಕರೂ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here