ದೆಹಲಿಯಲ್ಲಿ ರೈತರ ಸಮಸ್ಯೆಗೆ ದನಿಯಾದ ಸುಮಲತಾ

0
2640

ನವದೆಹಲಿ : ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ದೆಹಲಿಯಲ್ಲಿ ರೈತರ ಸಮಸ್ಯೆಗೆ ದನಿಯಾಗಿದ್ದಾರೆ.
ಮೊದಲ ಲೋಕಸಭಾ ಅಧಿವೇಶದಲ್ಲಿ ಪಾಲ್ಗೊಂಡಿರುವ ಸುಮಲತಾ ಅಂಬರೀಶ್, ಬಿಡುವ ಸಿಕ್ಕಾಗೆಲ್ಲ ಕೇಂದ್ರದ ಮಂತ್ರಿಗಳನ್ನ ಭೇಟಿಯಾಗಿ, ಮಂಡ್ಯ ಜನರ ಸಮಸ್ಯೆ ಮತ್ತು ಸಮಸ್ಯೆ ಪರಿಹಾರಕ್ಕೆ ಅಗತ್ಯ ಇರುವ ಸೌಲಭ್ಯ ಹಾಗೂ ಅನುದಾನ ಒದಗಿಸುವಂತೆ ಮನವಿ ಮಾಡ್ತಿದ್ದಾರೆ.
ಮಂಡ್ಯ ಅಂದ್ರೆ ಮೊದಲು ಕೇಳಿ ಬರೋದು ಕಾವೇರಿ ನೀರಿನ ಸಮಸ್ಯೆ. ಹೀಗಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಭೇಟಿಯಾಗಿರುವ ಸುಮಲತಾ, ಮಂಡ್ಯ ಭಾಗದಲ್ಲಿನ ನೀರಿನ ಅಭಾವ, ರೈತರ ಸಮಸ್ಯೆ, ಮಳೆ ಕೊರತೆ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ರೈತರ ಬೆಳೆ ಉಳಿಸಿಕೊಳ್ಳುವ ಸಲುವಾಗಿ ಈ ಕೂಡಲೇ 2TMC ನೀರನ್ನ ಕಾವೇರಿ ಜಲಾನಯನ ಪ್ರದೇಶದ ನಾಲೆಗಳಿಗೆ ಹರಿಸುವಂತೆ, ಮಂಡಳಿಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ. ಮತ್ತೊಬ್ಬ ಕೇಂದ್ರ ಸಚಿವ ಸದಾನಂದಗೌಡರಿಗೂ ಮನವಿ ಸಲ್ಲಿಸಿ, ಮಂಡಳಿಯ ಇಂದಿನ ಸಭೆಯಲ್ಲಿ ಕರ್ನಾಟಕದ ಪರ ನಿರ್ಧಾರ ಕೈಗೊಳ್ಳಲು ಕ್ರಮವಹಿಸಿ ಎಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here