ಫೇಸ್​ಬುಕ್​ಗೆ ಸುಮಲತಾ ಅಧಿಕೃತ ಎಂಟ್ರಿ..!

0
188

ಮಂಡ್ಯ: ಸೋಶಿಯಲ್ ಮೀಡಿಯಾಗೆ ಸುಮಲತಾ ಅಂಬರೀಶ್ ಅವರು ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆ ಡೇಟ್​ ಫಿಕ್ಸ್ ಆಗಿದ್ದು, ಈಗಾಗಲೇ ಸುಮಲತಾ ಅವರು ಪ್ರಚಾರ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಫೇಸ್​​ಬುಕ್​ಗೆ ಅಧಿಕೃತವಾಗಿ ಎಂಟ್ರಿಕೊಟ್ಟು ಜನರ ಜೊತೆಗಿರುವುದಾಗಿ ಭರವಸೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆ ಹೊಸ ಫೇಸ್​ಬುಕ್ ಪೇಜ್​ ತೆರೆದಿದ್ದು, “ನಾನು ಮಂಡ್ಯದ ಮನೆಮಗಳು ಸುಮಲತಾ ಅಂಬರೀಶ್. ಇನ್ಮುಂದೆ ತಮ್ಮೆಲ್ಲರ ಸಂಪರ್ಕದಲ್ಲಿ ನಾನಿರುತ್ತೇನೆ. ತಮ್ಮ ಸಲಹೆ, ಮಾರ್ಗದರ್ಶನ ನಿರಂತರವಾಗಿರಲಿ” ಎಂದು ಮನವಿ ಮಾಡಿದ್ದಾರೆ. ಹಾಗೆಯೇ ತಮ್ಮ ಫೇಸ್​ ಬುಕ್ ಪೇಜ್​ನ ಲಿಂಕ್​ ಹಾಕಿ ಲೈಕ್ ಮಾಡುವಂತೆ ಕೇಳಿದ್ದಾರೆ.

ಚುನಾವಣಾ ದಿನಾಂಕ ಎನೌನ್ಸ್​ ಆಗುತ್ತಿದ್ದಂತೆ ಇನ್ನಷ್ಟು ಆ್ಯಕ್ಟಿವ್ ಆಗಿರುವ ಸುಮಲತಾ ಅವರು ಇಂದು ಮಂಡ್ಯದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

LEAVE A REPLY

Please enter your comment!
Please enter your name here