ಸುಮಲತಾ ಅಂಬರೀಶ್​ಗೆ ಸಿಕ್ತು ಮೊದಲ ವೋಟ್..!

0
514

ಮಂಡ್ಯ: ಲೋಕ ಸಮರದ ರಣಕಣದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ​​ ಮೊದಲ ವೋಟ್​​ ಲಭಿಸಿದೆ. ವಿಶೇಷ ಸ್ಥಳಗಳಲ್ಲಿ ಡ್ಯೂಟಿ ನಿರ್ವಹಿಸುತ್ತಿರುವ ಯೋಧರಿಗಾಗಿ ವಿಶೇಷ ನಿಯಮದಂತೆ ಚುನಾವಣೆ ನಡೆದಿದ್ದು, ಮಂಡ್ಯದ ಯೋಧರೊಬ್ಬರು ಮತ ಚಲಾಯಿಸಿದ್ದಾರೆ.

ಮಂಡ್ಯ ಮೂಲದ ಯೋಧ ಆರ್. ನಾಯಕ್ ತಮ್ಮ ಮತವನ್ನು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಚಲಾಯಿಸಿ ಆ ಬಗ್ಗೆ ಫೇಸ್​ಬುಕ್ ಪೋಸ್ಟ್ ಕೂಡ ಹಾಕಿಕೊಂಡಿದ್ದಾರೆ. ಅಂಚೆ ಮತದಾನದ ಮೂಲಕ ಮೊದಲ ವೋಟ್​ ಹಾಕಿದ್ದಾರೆ. ಮಂಡ್ಯ ಮೂಲದ ಸಿಆರ್‌ಪಿಎಫ್ ಯೋಧ ಆರ್​ ನಾಯಕ್, ಸುಮಲತಾ ಅಂಬರೀಶ್ ಅವರಿಗೆ ಮತ ಚಲಾಯಿಸುತ್ತಿರುವ ಫೋಟೋವನ್ನು ಫೇಸ್‌ಬುಕ್‌ಗೆ ಅಪ್‌ಲೋಡ್  ಮಾಡಿದ್ದು, “ಸುಮಲತಾ ಮೇಡಂಗೆ ನಾನು ಓಟ್ ಮಾಡಿದ್ದೇನೆ. ಒಳ್ಳೆಯ ಲೀಡಿಂಗ್‌ನಿಂದ ಅವರು ಗೆಲ್ತಾರೆ ಎಂಬ ನಿರೀಕ್ಷೆ ಇದೆ. ಅಂಬರೀಶಣ್ಣ ಮಂಡ್ಯಕ್ಕೆ ಎಷ್ಟೋ ಕೊಡುಗೆ ನೀಡಿದ್ದಾರೆ. ಅವರ ಮೇಲೆ ಪ್ರೀತಿ ಇದ್ದರೆ ಸುಮಲತಾ ಮೇಡಂಗೆ ಬೆಂಬಲಿಸಿ, ಮಂಡ್ಯದವರ ಸ್ವಾಭಿಮಾನವನ್ನ ತೋರಿಸಿ” ಎಂಬ ಸಂದೇಶದೊಂದಿಗೆ  ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ಗಮನಿಸಿರೋ ಸುಮಲತಾ ಅಂಬರೀಶ್, “ಸಹೋದರ ನಾಯಕ್ ನಿಮ್ಮ ಪ್ರೀತಿಗೆ ನಾನು ಅಭಾರಿ. ಮಂಡ್ಯವನ್ನ ಸ್ವಾಭಿಮಾನದ ದಿಕ್ಕಿನಡೆಗೆ ಕೊಂಡೊಯ್ಯುವ ನನ್ನ ಮನದಾಸೆಗೆ ನೀವು ತೋರಿದ ಅಭಿಮಾನ, ಅಂಬರೀಶ್ ಮೇಲೆ ಇಟ್ಟಿಕೊಂಡಿರುವ ಅಭಿಮಾನಕ್ಕೆ ಧಕ್ಕೆಯಾಗದ ರೀತಿ ಮಂಡ್ಯದಲ್ಲಿ ಬದಲಾವಣೆ ಮಾಡಿ ತೋರಿಸುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here