ಡಯಾಬಿಟಿಸ್​ ಇದ್ದವರು ಈ ಹಣ್ಣುಗಳನ್ನು ಅವಾಯ್ಡ್ ಮಾಡಲೇ ಬೇಕು..!

0
196

ಯುವಕರಿಂದ ಹಿಡಿದು ವೃದ್ಧರವರೆಗೂ ಅತೀ ಹೆಚ್ಚಾಗಿ ಕಾಡುತ್ತಿರುವ ಕಾಯಿಲೆ ಅಂದ್ರೆ ಅದು ಡಯಾಬಿಟಿಸ್​ . ಈ ಕಾಯಿಲೆಗೆ ಸಂಪೂರ್ಣ ಔಷಧಿಯನ್ನು ಕಂಡುಹಿಡಿಯಲೂ ಇನ್ನೂ ಸಾಧ್ಯವಾಗಿಲ್ಲ. ಡಯಾಬಿಟಿಸ್​ಗೆ ಮೂಲ ಕಾರಣ ಇತ್ತೀಚಿನ ಫುಡ್ ಹ್ಯಾಬಿಟ್​​ಗಳು ಹಾಗೂ ಒತ್ತಡದ ಜೀವನಶೈಲಿ.

ಒಮ್ಮೆ ಈ ಕಾಯಿಲೆ ಕಾಣಿಸಿಕೊಂಡ ಮೇಲೆ ಅದನ್ನು ನಿತಂತ್ರಣದಲ್ಲಿಡಲು ಹರಸಾಹಸ ಪಡಬೇಕು. ಏನು ತಿನ್ನುವುದಕ್ಕೂ ಹಿಂದೇಟು ಹಾಕುತ್ತಾರೆ. ಡಯಾಬಿಟಿಸ್​ ಇದ್ದವರು ಹಣ್ಣುಗಳನ್ನು ತಿನ್ನುವಾಗ ಆದಷ್ಟು ಜಾಗೃತರಾಗಿರಬೇಕು. ಯಾವ ಹಣ್ಣನ್ನು ತಿನ್ನಬೇಕು ಹಾಗೂ ಯಾವ ಹಣ್ಣನ್ನು ತಿನ್ನಬಾರದು ಎಂಬುದನ್ನು ಮಧುಮೇಹಿಗಳು ತಿಳಿದು ಕೊಂಡಿರುವುದು ಅತೀ ಮುಖ್ಯ.

ಸಕ್ಕರೆ ಕಾಯಿಲೆ ಇರುವವರು ಹಣ್ಣುಗಳನ್ನು ತಿನ್ನಬಾರದು ಅಂತೇನಿಲ್ಲ. ಆದರೆ, ಕೆಲವು ಹಣ್ಣುಗಳಲ್ಲಿ ಕಾರ್ಬೋಹೈಡ್ರೇಟ್​ ಅಂಶ ಹೆಚ್ಚಿರುವುದರಿಂದ ಇಂತಹ ಹಣ್ಣುಗಳನ್ನು ಆದಷ್ಟು ಅವಾಯ್ಡ್​ ಮಾಡಿ.

ದ್ರಾಕ್ಷಿ : ಒಂದು ಚಿಕ್ಕ ದ್ರಾಕ್ಷಿಯಲ್ಲಿ ಒಂದು ಗ್ರಾಮ್​​ನಷ್ಟು ಕಾರ್ಬೋಹೈಡ್ರೇಟ್​ ಇರುತ್ತದೆ. ಇನ್ನು 15 ದ್ರಾಕ್ಷಿಗಳನ್ನು ತಿಂದರೆ ಅತೀ ಹೆಚ್ಚಿನ ಕಾರ್ಬೋಹೈಡ್ರೇಟ್​ ದೇಹಕ್ಕೆ ಸೇರಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಆದ್ದರಿಂದ ಆದಷ್ಟು ಅದನ್ನು ಅವಾಯ್ಡ್​ ಮಾಡುವುದು ಒಳ್ಳೆಯದು.

ಚೆರಿ : ಚೆರಿ ಹಣ್ಣನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಈ ಹಣ್ಣಿನಲ್ಲಿಯೂ ಕಾರ್ಬೋಹೈಡ್ರೇಟ್​ ಅಂಶ ಹೆಚ್ಚಾಗಿರುತ್ತದೆ ಹಾಗೂ ಈ ಹಣ್ಣನ್ನು ತಿಂದರೆ ದೇಹದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗುತ್ತದೆ. ಆದ ಕಾರಣ ಈ ಹಣ್ಣನ್ನು ತಿನ್ನದಿರಲು ವೈದ್ಯರು ಸಜೆಸ್ಟ್ ಮಾಡುತ್ತಾರೆ.

ಪೈನಾಪಲ್ : ಪೈನಾಪಲ್  ಜ್ಯೂಸ್ ಅಂದ್ರೆ ಎಲ್ಲರೂ ಇಷ್ಟಪಟ್ಟು ಕುಡಿಯುತ್ತಾರೆ. ಡಯಾಬಿಟೀಸ್ ಇರುವವರು ಯಾವುದೇ ಪೈನಾಪಲ್ ಜ್ಯೂಸ್​ ಕುಡಿಯಬೇಡಿ. ಯಾಕೆಂದರೆ ಈ ಹಣ್ಣಿನಲ್ಲಿ ಕಾರ್ಬೋಹೈಡ್ರೇಡ್ ಅಂಶದ ಜೊತೆಗೆ ಗ್ಲೈಸೆಮಿಕ್  ಅಂಶ ಅತೀ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಡಯಾಬಿಟಿಸ್​​ ರೋಗಿಗಳಿಗೆ ಹಿತವಲ್ಲ.

ಮಾವಿನ ಹಣ್ಣು : ಎಷ್ಟು ತಿಂದರೂ ಮತ್ತೆ ಮತ್ತೆ ಬೇಕೆನಿಸುವ ಹಣ್ಣು ಅಂದ್ರೆ ಅದು ಮಾವಿನ ಹಣ್ಣು. ಆದರೆ ಮಾವಿನ ಹಣ್ಣಿನ ಸೇವನೆ ಡಯಾಬಿಟಿಸ್​ ಇರುವವರು ಗ್ಲೈಸೆಮಿಕ್ ಹೆಚ್ಚಿಸುತ್ತದೆ. ಡಯಾಬಿಟಿಸ್​ ಇರುವವರು ಮಾವಿನ ಹಣ್ಣನ್ನು ಅವಾಯ್ಡ್​ ಮಾಡುವುದು ಉತ್ತಮ.

ಬಾಳೆಹಣ್ಣು : ಇದು ಕಾಲದಲ್ಲಿಯೂ ಲಭ್ಯವಾಗುವ ರುಚಿಯಾದಂತಹ ಹಣ್ಣು. ಬಾಳೆ ಹಣ್ಣು ರುಚಿ ಎನಿಸಲು ಅದರಲ್ಲಿರುವ ಕಾರ್ಬೋಹೈಡ್ರೇಟ್​ ಅಂಶ ಕಾರಣ. ಇದು ಡಯಾಬಿಟಿಸ್​ ರೋಗಿಗಳಿಗೆ ಒಳ್ಳೆಯದಲ್ಲ. ಹಾಗಂತ ಬಾಳೆಹಣ್ಣನ್ನು ಡಯಾಬಿಟಿಸ್ ಇರುವವರು ತಿನ್ನಲೇಬಾರದು ಅಂತೇನಿಲ್ಲ. ಆದರೆ ಹೆಚ್ಚು ಬಾಳೆಹಣ್ಣು ಸೇವಿಸುವುದು ಒಳ್ಳೆಯದಲ್ಲ.

ಡ್ರೈ ಫ್ರೂಟ್ಸ್ : ಡಯಾಬಿಟಿಸ್​ ಇರುವವರು ಆದಷ್ಟು ಡ್ರೈಫ್ರೂಟ್ಸ್ ಅನ್ನು ಅವಾಯ್ಡ್​ ಮಾಡಿ. ಬಾದಾಮ್, ಪಿಸ್ತ ಹಾಗೂ ಇನ್ನಿತರ ಡ್ರೈ ಫ್ರೂಟ್ಸ್​​ನಲ್ಲಿ ಅತಿಯಾದ ಕಾರ್ಬೋಹೈಡ್ರೇಟ್​ ಅಂಶ ಇದೆ. ಹಾಗಾಗಿ ಡ್ರೈಫ್ರೂಟ್ಸ್​ ಸೇವನೆ ಒಳ್ಳೆಯದಲ್ಲ.

ಡಯಾಬಿಟಿಸ್​ ಇರುವವರು ಯಾವ ಹಣ್ಣುಗಳನ್ನು ತಿನ್ನಲೇಬಾರದು ಅಂತೇನಿಲ್ಲ. ಆದರೆ ಕಾರ್ಬೋಹೈಡ್ರೇಟ್​ ಅಂಶ ಹೆಚ್ಚಿರುವ ಹಣ್ಣುಗಳ ಸೇವನೆ ಆದಷ್ಟು ಕಮ್ಮಿ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಡಯಾಬಿಟೀಸ್​ ಅನ್ನು ನಿಯಂತ್ರಣದಲ್ಲಿಡಬಹುದು.

LEAVE A REPLY

Please enter your comment!
Please enter your name here