Home ರಾಜ್ಯ ಸಿಎಂ ಜೊತೆಗಿನ ಮೀಟಿಂಗ್ ಬಳಿಕ ಸುಧಾಕರ್ ಹೇಳಿಕೆ

ಸಿಎಂ ಜೊತೆಗಿನ ಮೀಟಿಂಗ್ ಬಳಿಕ ಸುಧಾಕರ್ ಹೇಳಿಕೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ನಿಯಂತ್ರಣ ತಪ್ಪುತ್ತಿರುವ ಹಿನ್ನೆಲೆ ಸಿಎಂ ಇಂದು ತುರ್ತು ಸಭೆ ಕರೆದಿದ್ದರು. ಸಿಎಂ ಜೊತೆಗಿನ ಸಭೆ ಬಳಿಕ ಡಾ. ಕೆ.ಸುಧಾಕರ್​ ಮಾತನಾಡಿದ್ದು, ಗಂಭೀರ ಸಮಸ್ಯೆ ಇದ್ದವರು ಮಾತ್ರ ಆಸ್ಪತ್ರೆಗೆ ಅಡ್ಮಿಟ್ ಆಗಿ, ಸಣ್ಣಪುಟ್ಟ ರೋಗ ಲಕ್ಷಣಗಳಿಗೆ ಅಡ್ಮಿಟ್ ಆದ್ರೆ ಬೆಡ್​ ಕೊರತೆ ಎದುರಾಗಬಹುದು. ಕಡಿಮೆ ಅನಾರೋಗ್ಯ ಸಮಸ್ಯೆ ಇರೋರು ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳಿ. ಅನಗತ್ಯವಾಗಿ ಗುಂಪು ಸೇರುವುದನ್ನ ನಿಲ್ಲಿಸಿ ಎಂದು ಹೇಳಿದ್ದಾರೆ.

ಸರ್ಕಾರದ ವತಿಯಿಂದ ಚಿಕಿತ್ಸೆ, ಟೆಸ್ಟಿಂಗ್ ಹೆಚ್ಚಳ, ಕಂಟೈನ್ಮೆಂಟ್​​ ಜೋನ್ ಗಳನ್ನು ಹೆಚ್ಚಳ ಮಾಡುವುದು ಮೊದಲ ಆದ್ಯತೆಯಾಗಿದೆ. ವೈದ್ಯರ ಅವಶ್ಯಕತೆ ಇದ್ದವರಿಗೆ ಖಾಸಗಿ ಹೋಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಮೂರು ಸಾವಿರ ಹಾಸಿಗೆಯ ಹೋಟೆಲ್ ವ್ಯವಸ್ಥೆಯನ್ನು ಮಾಡಲಾಗಿದೆ.

ರಾಜ್ಯದಲ್ಲಿ ರೆಮ್ಡಿಸಿವಿರ್ ಕೊರತೆ ಬಗ್ಗೆಯೂ ಮಾತನಾಡಿರುವ ಸುಧಾಕರ್ ಯಾವುದೇ ಕೊರತೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇದರ ಹೊರತಾಗಿಯೂ ಖರೀದಿಗೆ ಪ್ರಕ್ರಿಯೆ ಆರಂಭವಾಗಿದೆ ಜಿಲ್ಲಾ ಆಸ್ಪತ್ರೆಯಲ್ಲಿ ಟೆಂಡರ್ ಕರೆದಿದ್ದು, ಆಕ್ಸಿಜನ್ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಸುಧಾಕರ್ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here

- Advertisment -

Most Popular

ಧನ್ವಂತರಿ ಹೋಮದ ಮೊರೆ ಹೋದ ಸಚಿವ ಈಶ್ವರಪ್ಪ..!

ಶಿವಮೊಗ್ಗ : ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಶೀಘ್ರದಲ್ಲೇ ಇಳಿಮುಖ ಕಾಣಲಿ ಎಂದು ಸಚಿವ ಈಶ್ವರಪ್ಪ, ಹೋಮದ ಮೊರೆ ಹೋಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೆ, ಏರಿಳಿತ ಕಾಣುತ್ತಿರುವ ಹಿನ್ನೆಲೆಯಲ್ಲಿ,...

ಕೊಪ್ಪಳದಲ್ಲಿ ಒಂದು ಬ್ಲಾಕ್ ಫಂಗಸ್ ಕೇಸ್ ಪತ್ತೆ..!

ಕೊಪ್ಪಳ: ಕೊರೊನಾ ಎರಡನೇ ಅಲೆ ತೀವ್ರವಾಗಿ ಪ್ರಸರಣವಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೊಂದು ಆತಂಕ ಎದುರಾಗಿದ್ದು, ಬ್ಲ್ಯಾಕ್​ ಫಂಗಸ್​ ಹರಡುವಿಕೆ ಬಗ್ಗೆ ಭಯ ಶುರುವಾಗಿದೆ. ಹೀಗಿರುವಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಬ್ಲ್ಯಾಕ್​ ಫಂಗಸ್ ಕಾಣಿಸಿಕೊಂಡಿದೆ ಎಂದು...

‘ತೌಕ್ತೆ’ ಅವಾಂತರಕ್ಕೆ ಕತ್ತಲಲ್ಲಿ ಉತ್ತರಕನ್ನಡ ಬೆಳಕು ನೀಡಲು ಹೆಸ್ಕಾಂ ಸಿಬ್ಬಂದಿಗಳಿಂದ ಸಾಹಸ..!

ಕಾರವಾರ : ತೌಕ್ತೆ ಚಂಡಮಾರುತ ಸೃಷ್ಟಿಸಿದ ಅವಾಂತರ ಒಂದೆರೆಡಲ್ಲ. ಒಂದೆಡೆ ಕಡಲು ಉಕ್ಕೇರಿ ಕಡಲತೀರದ ಮಂದಿ ಸಂಕಷ್ಟಕ್ಕೆ ಸಿಲುಕಿದ್ದರೇ ಇನ್ನೊಂದೆಡೆ ಎಲ್ಲೆಡೆ ಮರಗಿಡಗಳು ಉರುಳಿ ವಿದ್ಯುತ್ ಕಂಬಗಳು ಬುಡಮೇಲಾಗಿವೆ. ಪರಿಣಾಮ ಉತ್ತರಕನ್ನಡ ಜಿಲ್ಲೆಯ...

‘ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವಲ್ಲಿ ವೈದ್ಯರ ತಂಡ ಯಶಸ್ವಿ’

ಶಿವಮೊಗ್ಗ: ಪ್ರಾಣದ ಹಂಗನ್ನೂ ಲೆಕ್ಕಿಸದೇ ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಕೋರೋನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿಗೆ ಮೂರನೇ ಹೆರಿಗೆ ಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ....

Recent Comments