Home ರಾಜ್ಯ ಗೋಹತ್ಯೆ ನಿಷೇಧಕ್ಕೆ ಸಚಿವ ಸುಧಾಕರ್ ಆಗ್ರಹ!

ಗೋಹತ್ಯೆ ನಿಷೇಧಕ್ಕೆ ಸಚಿವ ಸುಧಾಕರ್ ಆಗ್ರಹ!

ಚಿಕ್ಕಬಳ್ಳಾಪುರ: ರಾಕ್ಷಸ ಗುಣಗಳನ್ನು ಹೊಂದಿರುವವರು ಮಾತ್ರ ಗೋಮಾಂಸ ಸೇವಿಸುತ್ತಾರೆ. ಹಸುವಿನ ಮಾಂಸ ಸೇವನೆ ಅಪಾಯಕಾರಿಯಾಗಿದ್ದು, ಅಮಾನವೀಯವೂ ಹೌದು. ಈ ನಿಟ್ಟಿನಲ್ಲಿ ಗೋಮಾಂಸ ಸೇವನೆಯನ್ನ ನಿಷೇಧಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಒತ್ತಾಯ ಮಾಡುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.

ಹೊರವಲಯದ ಚಿತ್ರಾವತಿ ಬಳಿ ಶ್ರೀ ವೆಂಕಟೇಶ್ವರ ಗೋ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಸುಧಾಕರ್, ನಮ್ಮ ಮನೆ ಮಕ್ಕಳಂತಿರುವ ಹಸುಗಳನ್ನ ವಯಸ್ಸಾದ ಮೇಲೆ ಅದು ಉಪಯೋಗಕ್ಕೆ ಬರಲ್ಲ. ಲಾಭ ಮಾಡಿಕೋಡೋದಿಲ್ಲ, ಅನ್ನೋ ಲೆಕ್ಕಾಚಾರದಲ್ಲಿ ಅದನ್ನ ಕಸಾಯಿಖಾನೆಗೆ ಮಾರಬಾರದು. ನಮ್ಮ ಏಳಿಗೆಗೆ ಶ್ರಮಿಸಿದ, ಭಾರತೀಯ ಪರಂಪರೆಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಹಸುಗಳನ್ನು ಮಾಂಸಕ್ಕೆ ಮಾರಬಾರದು. ಹಾಗೇ, ಗೋ ಹತ್ಯೆ ನಿಷೇಧವನ್ನ ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿದರು.

ಗೋ ಹತ್ಯೆ ಮಹಾ ಪಾಪವಾಗಿದ್ದು, ಮನುಷ್ಯ ನಾಲಿಗೆ ಚಪಲಕ್ಕೆ ಏನ್ ಬೇಕಾದರೂ ತಿಂತಾನೆ. ಗೋ ಮಾಂಸ ಮಾರಾಟವೇ ಈಗ ದೊಡ್ಡ ವ್ಯವಹಾರವಾಗಿದೆ. ಗೋ ಮಾಂಸ ರಫ್ತು ನಿಷೇಧ ಮಾಡಬೇಕು ಅನ್ನೋ ವ್ಯಕ್ತಿಗಳಲ್ಲಿ ನಾನು ಒಬ್ಬ ಎಂದು ಪ್ರತಿಪಾದಿಸಿದರು. ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗೋ ಹತ್ಯೆ ವಿರುದ್ಧ ಬೃಹತ್ ಪ್ರಮಾಣದಲ್ಲಿ ಆಂದೋಲನ ನಡೆಸಬೇಕೆಂದು ಕರೆ ನೀಡಿದರು.

ಈ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ, ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ಜಿ.ಪಂ.ಅಧ್ಯಕ್ಷ ಚಿಕ್ಕನರಸಿಂಹಯ್ಯ, ಹಿರಿಯ ಮುಖಂಡ ಕೆ.ವಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

-ಮಲ್ಲಪ್ಪ. ಎಂ.ಶ್ರೀರಾಮ್

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments