ನಟ ಕಿಚ್ಚ ಸುದೀಪ್ ವಿಧಿವಶರಾದ ತಮ್ಮ ಅಭಿಮಾನಿ ನಂದೀಶ್ ಫೋಟೋವನ್ನು ಟ್ವಿಟ್ಟರ್ ಪ್ರೊಫೈಲ್ಗೆ ಹಾಕಿ ಸ್ಮರಿಸಿದ್ದಾರೆ.
ಸುದೀಪ್ ಅವರ ಅಭಿಮಾನಿ, ಕಿಚ್ಚ ಸುದೀಪ್ ಸೇನಾ ಸಮಿತಿಯ ರಾಜ್ಯ ಕಾಯದರ್ಶಿಯಾಗಿದ್ದ ನಂದೀಶ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಎರಡು ದಿನಗಳ ಹಿಂದೆ ಸಂಭವಿಸಿದ್ದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.ಆಪ್ತ ಅಭಿಮಾನಿಯ ಅಗಲುವಿಕೆಗೆ ಕಂಬನಿ ಮಿಡಿದಿರುವ ಕಿಚ್ಚ ಈ ಬಗ್ಗೆ ಟ್ವಿಟ್ಟರ್ನಲ್ಲಿ ತಮ್ಮ ನೋವು ಹಂಚಿಕೊಂಡಿದ್ದರು. “ ನನ್ನ ಸಹೋದರ ಸ್ಥಾನದಲ್ಲಿದ್ದ ನಂದೀಶ್ ಅವರ ಸಾವಿನ ಸುದ್ದಿ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನಾನು ಯಾವಾಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ . ನಿಮ್ಮ ಅಗಲುವಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ನಿಮ್ಮ ಕುಟುಂಬಕ್ಕೆ ನೀಡಲಿ. ನಿಮ್ಮ ಕುಟುಂಬದ ಜೊತೆ ಸದಾ ನಾನಿರುತ್ತೇನೆ “ ಎಂದು ಬರೆದುಕೊಂಡಿದ್ದರು. ಇದೀಗ ಪ್ರೋಫೈಲ್ ಪಿಕ್ಚರ್ಗೆ ಅವರ ಫೋಟೋ ಹಾಕಿ ನೆನಪಿಸಿಕೊಂಡಿದ್ದಾರೆ.
ಟ್ಟಿಟ್ಟರ್ ಪ್ರೊಫೈಲ್ಗೆ ಅಭಿಮಾನಿಯ ಫೋಟೋ ಹಾಕಿ ಸ್ಮರಿಸಿದ ಸುದೀಪ್!
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on