Homeರಾಜ್ಯಟ್ವೀಟ್ ಮೂಲಕ ಬೇಸರ ವ್ಯಕ್ತ ಪಡಿಸಿದ ಸುದೀಪ್..!

ಟ್ವೀಟ್ ಮೂಲಕ ಬೇಸರ ವ್ಯಕ್ತ ಪಡಿಸಿದ ಸುದೀಪ್..!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಎರಡನೆ ಅಲೆ ಮುಂದುವರೆದಿದ್ದು, ಕೊವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೆಲವು ನಿರ್ಭಂದಗಳನ್ನು ಹಾಕಿದೆ. ಥಿಯೆಟರ್ ಗಳಿಗೆ ಶೇ.50ರಷ್ಟು ಮಾತ್ರ ಅವಕಾಶ ಕೊಟ್ಟಿರುವುದಕ್ಕೆ ನಟ ಸುದೀಪ್ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೊರೋನಾ ಹಿನ್ನೆಲೆ ಸರ್ಕಾರ ಹೊರಡಿಸಿದ ಆದೇಶಗಳು ಚರ್ಚೆಗೆ ಗ್ರಾಸವಾಗಿವೆ. ಥಿಯೇಟರ್ ಆಕ್ಯುಪೆನ್ಸಿಯನ್ನು ಶೇಕಡ 50% ಗೆ ಇಳಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರವಾದ ಪರ ವಿರೋಧಗಳು ವ್ಯಕ್ತವಾಗುತ್ತಿದೆ.

ಚಿತ್ರರಂಗದ ಗಣ್ಯರೆಲ್ಲರೂ ಟ್ವೀಟ್ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಈ ನಿರ್ಧಾರದಿಂದ ಯುವರತ್ನ ಸಿನಿಮಾಗೆ ತುಂಬ ದೊಡ್ಡ ಹಿನ್ನೆಡೆ ಉಂಟಾಗಿದೆ. ಕಿಚ್ಚ ಸುದೀಪ್ ಅವರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಈ ನಿರ್ಧಾರ ಶಾಕ್‌ ತಂದಿದೆ. ಯುವರತ್ನ ಸಿನಿಮಾ ಈ ಪರಿಸ್ಥಿತಿಯನ್ನ ಮೆಟ್ಟಿನಿಂತು ಸಕ್ಸಸ್‌ ಕಾಣಲಿ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments