ಟಿ20, ಒಡಿಐನಲ್ಲೂ ‘ವಾಲ್​​’ ಓಪನಿಂಗ್ ಬರ್ಬೇಕು ಅನ್ನೋದೇ ಕಿಚ್ಚನ ಮಹದಾಸೆ..!

0
523

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಡಬಲ್ ಸೆಂಚುರಿ (215) ಸಿಡಿಸಿದ ಕನ್ನಡಿಗ ಮಯಾಂಕ್ ಅಗರ್​ವಾಲ್​ ಆಟಕ್ಕೆ ಎಲ್ಲೆಡೆ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ. ರೋಹಿತ್ ಶರ್ಮಾ ಜೊತೆಗೂಡಿ ಮೊದಲ ವಿಕೆಟ್​ಗೆ ತ್ರಿಶತಕದ ಜೊತೆಯಾಟ ಆಡಿದ್ದಲ್ಲದೆ ವೈಯಕ್ತಿಕವಾಗಿ ಚೊಚ್ಚಲ ಶತಕ, ದ್ವಿಶತಕ ಸಿಡಿಸಿ ಮಿಂಚಿರುವ ಅಗರ್​ವಾಲ್ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಂತೂ ತನ್ನ ಸ್ಥಾನವನ್ನು ಭದ್ರ ಮಾಡಿಕೊಳ್ಳುವ ಭರವಸೆ ಮೂಡಿಸಿದ್ದಾರೆ.
ಇನ್ನು ಮಯಾಂಕ್ ಆಟವನ್ನು ಮೆಚ್ಚಿ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದಾರೆ. ದ್ವಿಶತಕ ವೀರ ‘ವಾಲ್​’ಗೆ ಅಭಿನಂದನೆ ಸಲ್ಲಿಸಿರುವ ಕಿಚ್ಚ, ಬೇರೆ ಫಾರ್ಮೇಟ್​ಗಳಲ್ಲೂ (ಒಡಿಐ, ಟಿ20) ನಿಮ್ಮನ್ನು ಆರಂಭಿಕರನ್ನಾಗಿ ನೋಡಲು ಕಾಯ್ತಿದ್ದೇನೆ ಅಂತ ವಿಶ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here