ಯುವಿ ಬಗ್ಗೆ ಕಿಚ್ಚ ಮಾಡಿದ ಟ್ವೀಟ್ ನೋಡಿದ್ರೆ ನೀವೂ ಭಾವುಕರಾಗ್ತೀರಿ..!

0
541

2011ರ ವಿಶ್ವಕಪ್​ ಹೀರೊ ಯುವರಾಜ್ ಸಿಂಗ್ ಇಂಟರ್​ನ್ಯಾಷನಲ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ನಿನ್ನೆ ಯುವಿ ನಿವೃತ್ತಿ ಘೋಷಿಸಿ ಮಾತನಾಡುತ್ತಿದ್ದಂತೆ ಇಡೀ ಕ್ರಿಕೆಟ್ ಜಗತ್ತೇ ಭಾವುಕವಾಯಿತು.
ಯುವಿ ವಿಶ್ವಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ಆಲ್​ರೌಂಡರ್. 2011ರಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಯುವಿಯನ್ನು ಇಡೀ ವಿಶ್ವವೇ ಮೆಚ್ಚಿದೆ. ಕ್ಯಾನ್ಸರ್​ ನಡುವೆಯೂ ತನ್ನ ಪ್ರಾಣ ಲೆಕ್ಕಿಸದೇ ಆಲ್​ರೌಂಡ್ ಪರ್ಫಾರ್ಮೆನ್ಸ್ ನೀಡಿ ಭಾರತದ ಮುಡಿಗೆ ವಿಶ್ವಕಪ್ ಕಿರೀಟ ಹಾಕಿಸಿದ ಯುವಿಗೆ ಇಡೀ ವಿಶ್ವ ಕ್ರಿಕೆಟ್ ಸಲಾಂ ಹೊಡೆದಿತ್ತು. ಯುವಿ ಆಟಕ್ಕೆ ತಲೆಬಾಗಿತ್ತು. ಅದು ಎಂದಿಗೂ, ಎಂದಿಗೂ ನೆನಪಿನಲ್ಲಿ ಉಳಿಯುತಂಹದು.
ಯುವಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದು, ನಟ ಕಿಚ್ಚ ಸುದೀಪ್ ಅವರನ್ನೂ ಕೂಡ ಭಾವುಕರನ್ನಾಗಿ ಮಾಡಿದೆ. ಯುವಿ ಕುರಿತು ಸುದೀಪ್ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
”ಟ್ವೀಟ್ ಮಾಡ್ತಿರೋ ನಮ್ ಬಗ್ಗೆ ನಿಮ್ಗೆ ಗೊತ್ತಿಲ್ದೇ ಇರಬಹುದು. ಆದ್ರೆ, ನಾವು ನಿಮ್ಮನ್ನು ಬಹಳ ಪ್ರೀತಿಸ್ತೀವಿ. ನೀವು, ನಿಮ್ಮ ಆಟದ ವೈಖರಿ ನಿಜಕ್ಕೂ ಅನೇಕ ಯುವ ಆಟಗಾರರಿಗೆ ಸ್ಫೂರ್ತಿ. ನನ್ನಿಂದ ಸಾಧ್ಯವಾದ್ರೆ ಸಮಯವನ್ನು ಹಿಂದಕ್ಕೆ ಹಾಕಿ ಮತ್ತೊಮ್ಮೆ ನಿಮ್ಮನ್ನು ಬ್ಲೂ ಜೆರ್ಸಿಯಲ್ಲಿ ನೋಡುವ ಆಸೆ. ನಿಮ್ಮನ್ನು, ನಿಮ್ಮ ಆಟವನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ” ಅಂತ ಸುದೀಪ್ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here