ಒಂದೇ ಸಿನಿಮಾದಲ್ಲಿ ಸುದೀಪ್​ ಮತ್ತು ಅಭಿಷೇಕ್​ ಅಂಬರೀಶ್..!?

0
240

ಅಮರ್ ಚಿತ್ರದ ಮೂಲಕ ಸ್ಯಾಂಡಲ್​​ವುಡ್​​​ಗೆ ಎಂಟ್ರಿ ಕೊಟ್ಟಿರುವ ಜೂನಿಯರ್ ರೆಬಲ್ ಸ್ಟಾರ್ ಅಭಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ಒಂದು ಬಂಪರ್ ಆಫರ್ ಸಿಕ್ಕಿದೆ.
ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಆಗಮನ ಅದ್ದೂರಿಯಾಗಿ ಆಗಿದೆ. ಅವರ ಚೊಚ್ಚಲ ಸಿನಿಮಾ ‘ಅಮರ್’ ನಿನ್ನೆ ರಾಜ್ಯಾದಂತ್ಯ ಬಿಡುಗಡೆಯಾಗಿದೆ.ಅಭಿಷೇಕ್ ನಟನೆ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು.
ಈ ಚಿತ್ರದಲ್ಲಿ ಅವರ ಪಾತ್ರದ ಹೆಸರು ಅಮರ್. ಅಮರ್ ಇಲ್ಲಿ ಲವರ್ ಬಾಯ್ ಹಾಗೂ ಮಾಸ್ ಹೀರೋ ಎರಡೂ ಆಗಿದ್ದಾರೆ. ಅವರು ಫೈಟ್ ಹಾಗೂ ಡೈಲಾಗ್ ಹೇಳುವ ಶೈಲಿ ಅಪ್ಪನನ್ನು ನೆನೆಪು ಮಾಡುತ್ತದೆ. ಅಭಿ ಸ್ಕ್ರೀನ್ ಪ್ರೆಸೆನ್ಸ್ ಚೆನ್ನಾಗಿದೆ. ಡ್ಯಾನ್ಸ್ ಮತ್ತು ನಟನೆಯಲ್ಲಿ ಇನ್ನಷ್ಟು ಅನುಭವ ಬೇಕಿದೆ ಎನ್ನುವುದು ಅನೇಕ ದೃಶ್ಯಗಳಲ್ಲಿ ಕಾಣುತ್ತದೆ.
ಈ ಸಿನಿಮಾಗೆ ದಕ್ಷಿಣ ಭಾರತದ ಖ್ಯಾತ ನಟರು ಶುಭ ಹಾರೈಸಿದ್ದಾರೆ. ಈಗ ಕನ್ನಡದ ನಟ ಕಿಚ್ಚ ಸುದೀಪ್ ಸಹ ಅಭಿಷೇಕ್ ಗೆ ವಿಶ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ವಿಡಿಯೋ ಮೂಲಕ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.
‘ಅಮರ್’ ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್. ಅಭಿ ಎರಡು ಒತ್ತಡವನ್ನು ಹೇಗೆ ನೀವು ನಿಭಾಯಿಸುತ್ತಿದ್ದೀರಿ. ಮೊದಲ ಸಿನಿಮಾ ಹಾಗೂ ಅಂಬರೀಶ್ ಮಗ ಎನ್ನುವ ಒತ್ತಡ ನಿಮ್ಮ ಮೇಲೆ ಇದೆ. ಅಂಬರೀಶ್ ಮಗ ಏನು ಮಾಡುತ್ತಾರೆ ಎನ್ನುವುದನ್ನು ಕೇಳಿ ಕೇಳಿ ನಿಮಗೂ ಬೋರ್ ಆಗಿರುತ್ತದೆ. ಅದನೆಲ್ಲ ಬಿಟ್ಟು ಸಿನಿಮಾವನ್ನು ಎಂಜಾಯ್ ಮಾಡಿ.” ಎಂಬ ಸಲಹೆಯನ್ನು ಸುದೀಪ್ ನೀಡಿದ್ದಾರೆ.
ಚಿತ್ರರಂಗದ ಪರವಾಗಿ ನಿಮಗೆ ಸ್ವಾಗತ ಹೇಳುತ್ತಿದ್ದೇನೆ. ಚಿತ್ರರಂಗಕ್ಕೆ ಬಂದಿದ್ದೀರಿ. ಬನ್ನಿ ಒಟ್ಟಿಗೆ ಸೇರೋಣ.. ಒಟ್ಟಿಗೆ ನಡೆಯೋಣ..ಒಟ್ಟಿಗೆ ಕೆಲಸ ಮಾಡೋಣ. ಆಲ್ ದಿ ಬೆಸ್ಟ್. ನಿಮ್ಮ ಸಿನಿಮಾ ನೋಡಲು ನನಗೆ ಹೆಮ್ಮೆ ಆಗುತ್ತದೆ.” ಎಂದು ಸುದೀಪ್ ಶುಭಾಶಯ ತಿಳಿಸಿದ್ದಾರೆ.
ಕಿಚ್ಚನ ಈ ಮಾತುಗಳು ಕೇಳಿದ್ರೆ ಮುಂದೆ ಕಿಚ್ಚ ಹಾಗು ಅಭಿ ಒಟ್ಟಿಗೆ ನಟಿಸುವ ಸಾಧ್ಯತೆಗಳನ್ನ ಅಲ್ಲಗಳೆಯೊಹಾಗಿಲ್ಲ . ಯಾಕಂದ್ರೆ ಅಂಬಿ ಕುಟುಂಬಕ್ಕೆ ಸುದೀಪ್ ಆತ್ಮೀಯರಾಗಿದ್ದಾರೆ ಕಿಚ್ಚನ ಟ್ವೀಟ್ ನೋಡಿದ ಅಭಿಮಾನಿಗಳು ಆದಷ್ಟು ಬೇಗ ಜೂನಿಯರ್ ಅಂಬಿ ಜೊತೆ ಕೆಲಸ ನಟಿಸುವಂತಾಗಲಿ ಅಂತ ಆಶಿಸುತ್ತಿದ್ದಾರೆ.
-ಮನೋಜ್ ನರಗುಂದಕರ್

LEAVE A REPLY

Please enter your comment!
Please enter your name here