Home ಸಿನಿ ಪವರ್ ಸಲ್ಮಾನ್​ ಖಾನ್​ಗೆ ನಮ್ಮ ಸುದೀಪ್​ ಕನ್ನಡ ಮೇಷ್ಟ್ರು..!

ಸಲ್ಮಾನ್​ ಖಾನ್​ಗೆ ನಮ್ಮ ಸುದೀಪ್​ ಕನ್ನಡ ಮೇಷ್ಟ್ರು..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೆ ಪರ ಭಾಷಾ ಚಿತ್ರರಂಗದಲ್ಲೂ ಗುರುತಿಸಿ ಕೊಂಡಿರುವ ಸ್ಟಾರ್. ಅದರಲ್ಲೂ ಬಾಲಿವುಡ್​ ಮತ್ತು ಟಾಲಿವುಡ್​​ನಲ್ಲಿ ಕನ್ನಡದ ‘ಮಾಣಿಕ್ಯ’ನ ದರ್ಬಾರು ಜೋರಾಗಿಯೇ ಇದೆ. ಚಂದನವನದ ‘ರನ್ನ’ನ ಕಾಲ್​ಶೀಟ್​ಗೆ ಹಿಂದಿ, ತೆಲುಗು ಚಿತ್ರರಂಗ ಕೂಡ ಕಾಯ್ತಿದೆ ಅನ್ನೋದು ಕನ್ನಡಿಗರು ಖುಷಿ ಪಡಬೇಕಾದ ವಿಷಯ.
ಸದ್ಯ ಸುದೀಪ್ ಸಲ್ಮಾನ್ ಖಾನ್ ಜೊತೆ ಬಾಲಿವುಡ್​ನ ‘ದಬಾಂಗ್ -3’ನಲ್ಲಿ ನಟಿಸ್ತಿರೋದು ಗೊತ್ತೇ ಇದೆ. ದಬಾಂಗ್ -3 ಹಿಂದಿ ಮಾತ್ರವಲ್ಲದೆ ನಮ್ಮ ಕನ್ನಡ ಭಾಷೆಯಲ್ಲಿ ತೆರೆಕಾಣುತ್ತಿರುವ ಸುದ್ದಿಯೂ ನಿಮ್ಗೆ ಗೊತ್ತು. ವಿಶೇಷ ಏನಪ್ಪ ಅಂದ್ರೆ ಕನ್ನಡದಲ್ಲಿ ಸಲ್ಮಾನ್​ ಖಾನೇ ತಮ್ಮ ಡೈಲಾಗ್​ಗಳನ್ನು ಡಬ್ ಮಾಡಲಿದ್ದಾರೆ. ಸಲ್ಮಾನ್​ ಖಾನಿಗೆ ಕನ್ನಡದಲ್ಲಿ ಡಬ್​ ಮಾಡುವಂತೆ ಪ್ರೇರೇಪಿಸಿದ್ದು ನಮ್ಮ ಕಿಚ್ಚನೇ. ಅವರೇ ಸಲ್ಲುಗೆ ಕನ್ನಡ ಪಾಠ ಮಾಡ್ತಿದ್ದಾರಂತೆ. ಇನ್ನು ದಬಾಂಗ್​ 3 ಡಿ.20ರಂದು ರಿಲೀಸ್ ಆಗಲಿದೆ.

LEAVE A REPLY

Please enter your comment!
Please enter your name here

- Advertisment -

Most Popular

ದುಡ್ಡು  ಕೊಟ್ರೆ ಮಾತ್ರ ವಾರ್ಡ್​ ಬಾಯ್​​​ಗಳ ಕೆಲಸ..!

ಬೆಂಗಳೂರು : ದುಡ್ಡು ದುಡ್ಡು ದುಡ್ಡು ..  ಇಲ್ಲಿ ವಾರ್ಡ್​ ಬಾಯ್​ಗಳು ನೆಟ್ಟಗೆ ಕೆಲಸ ಮಾಡ್ಬೇಕು ಅಂದ್ರೆ ದುಡ್ಡು ಬಿಚ್ಚಲೇ ಬೇಕು! ಅಲ್ಪಸ್ವಲ್ಪ ದುಡ್ಡು ಕೊಟ್ರೆ ಧಿಮಾಕಿಂದ, ಸೊಕ್ಕಿನಿಂದ ಕೆಲಸ ಮಾಡ್ತಾರೆ! ಸ್ವಲ್ಪ...

ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಢ | 8 ಮಂದಿ ಸಜೀವ ದಹನ

ಅಹಮದಾಬಾದ್ : ನವರಂಗಪುರದ ಶ್ರೇಯ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಅಗ್ನಿ ಅವಘಢ ಸಂಭಂವಿಸಿದ್ದು, 8  ಮಂದಿ ರೋಗಿಗಳು ಸಜೀವ ದಹನಗೊಂಡಿದ್ದಾರೆ ವರದಿಯಾಗಿದೆ. ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿನ ಇಂಟೆನ್ಸಿವ್ ಕೇರ್ ಯುನಿಟ್ ( ಐಸಿಯು)...

ಬನ್ನೇರುಘಟ್ಟದಲ್ಲಿ ಸಫಾರಿ ಹುಲಿಯೊಂದಿಗೆ ಕಾಡಿನ ಹುಲಿ ಕಾದಾಟ..!

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಹುಲಿ ಮತ್ತು ಕಾಡಿನ ಹುಲಿ ಕಾದಾಡಿಕೊಂಡಿವೆ. ಸಫಾರಿ ಹುಲಿ ಮತ್ತು ಕಾಡಿನ ಹುಲಿ ಮುಖಾಮುಖಿಯಾಗಿದ್ದು, ಕಾದಾಟಕ್ಕಿಳಿದಿವೆ.  ಅವೆರಡರ ನಡುವೆ ತಂತಿ ಬೇಲಿ ಇದ್ದರೂ ಘರ್ಜಿಸುತ್ತಾ ಜಗಳಕ್ಕಿಳಿದಿವೆ. ಹುಲಿಗಳ ಈ ಕಾದಾಟದ...

ಮಲೆನಾಡಿನಲ್ಲಿ ವರ್ಷಧಾರೆ ವೈಭವ ; ಕಣ್ಮನ ಸೆಳೆಯುತ್ತಿದೆ ಜೋಗ ಜಲಪಾತ

 ಶಿವಮೊಗ್ಗ : ರಾಜ್ಯಕ್ಕೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಆಶ್ಲೇಷ ಮಳೆಯ ಅಬ್ಬರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಜಗದ್ವಿಖ್ಯಾತ ಜೋಗ ಜಲಪಾತ, ಮೈದುಂಬುತ್ತಿದ್ದು, ಮಂಜು ಮುಸುಕಿನ ಚೆಲ್ಲಾಟದ...

Recent Comments